ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

97 ಉಗ್ರರ ಬಂಧನ

ಜೈಲು ಸೇರಿ ಭಾರಿ ದಾಳಿ ಸಂಚು
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ):ಇಲ್ಲಿನ ಹೈದರಾಬಾದ್‌ ಸೆಂಟ್ರಲ್‌ ಜೈಲು ಸೇರಿದಂತೆ ವಿವಿಧೆಡೆ ಭಾರಿ ದಾಳಿಗಳಿಗೆ ಸಂಚು ರೂಪಿಸಿದ್ದ  97 ಮಂದಿ ಪ್ರಮುಖ ಉಗ್ರರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಸೇನಾ ಪಡೆ ಶುಕ್ರವಾರ ತಿಳಿಸಿದೆ.

ಅಮೆರಿಕದಲ್ಲಿ 2002ರಲ್ಲಿ ನಡೆದ ‘ವಾಲ್‌ಸ್ಟ್ರೀಟ್‌’ನ ಪತ್ರಕರ್ತ ಡೇನಿಯೆಲ್‌ ಪರ್ಲ್‌ ಹತ್ಯೆಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ  ಅಲ್‌ ಕೈದಾ ನಾಯಕ ಅಹ್ಮದ್‌ ಒಮರ್‌ ಸಯೀದ್‌ ಶೇಖ್‌ನನ್ನು ಹೊರತರುವ ಉದ್ದೇಶದಿಂದ   ಹೈದರಾಬಾದ್‌ ಸೆಂಟ್ರಲ್‌ ಜೈಲ್‌ ಮೇಲೆ ದಾಳಿ ನಡೆಸಲು ಉಗ್ರರು ಸಂಚು ಹೂಡಿದ್ದರು ಎಂದು ಸೇನಾ ವಕ್ತಾರ ಲೆಫ್ಟಿನೆಂಟ್‌ ಜನರಲ್‌ ಅಸೀಂ ಸಲೀಂ ಬಜ್ವಾ ತಿಳಿಸಿದ್ದಾರೆ.

‘ಬಂಧಿತ ಉಗ್ರರು ಭಾರತೀಯ ಉಪ ಖಂಡದ ಅಲ್‌ ಕೈದಾ, ಲಷ್ಕರ್‌ –ಎ–ಝಂಗ್ವಿ (ಎಲ್ಇಜೆ) ಮತ್ತು ಪಾಕಿಸ್ತಾನದಲ್ಲಿ ತೆಹ್ರೀಕ್‌ – ಎ–ತಾಲಿಬಾನ್‌ನಂತಹ ಸಂಘಟನೆಗಳ ಸದಸ್ಯರಾಗಿದ್ದಾರೆ.  ಮೆಹ್ರಾನ್‌ ವಾಯುನೆಲೆ, ಜಿನ್ನಾ ವಿಮಾನ ನಿಲ್ದಾಣ, ಕಮ್ರಾದ  ಪಾಕಿಸ್ತಾನದ ಸೇನಾನೆಲೆ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಸ್ಫೋಟ ನಡೆಸುವುದು ಉಗ್ರರ ಹುನ್ನಾರವಾಗಿತ್ತು ಎಂದು ಬಜ್ವಾ ತಿಳಿಸಿದರು.

2013ರಲ್ಲಿ ಆರಂಭಿಸಲಾದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇದುವರೆಗೂ 12ಸಾವಿರ ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಭಾರಿ ಪ್ರಮಾಣದ ಅಪರಾಧ ಕೃತ್ಯಗಳನ್ನು ತಪ್ಪಿಸಲಾಗಿದೆ ಎಂದು ಬಜ್ವಾ  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT