ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

e–ಪುಸ್ತಕ

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಕನ್ನಡದ ಆಧುನಿಕ ರಾಜಕೀಯ ಚಿಂತನೆಯ ಇತಿಹಾಸವನ್ನು ರಚಿಸುವುದಾದರೆ ಅದರಲ್ಲಿ ಕಾಣ ಸಿಗುವ ಮೊದಲ ಮತ್ತು ಅತ್ಯಂತ ಮಹತ್ವದ ಚಿಂತಕರೆಂದು ಗುರುತಿಸಬಹುದಾದ ಹೆಸರು ಡಿ.ವಿ.ಗುಂಡಪ್ಪನವರದ್ದು. ‘ಮಂಕುತಿಮ್ಮನ ಕಗ್ಗ’ ಕೃತಿಗೆ ದೊರೆತ ಪ್ರಸಿದ್ಧಿಯಿಂದಾಗಿ ಡಿ.ವಿ.ಜಿ.ಯವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿದ್ದ ರಾಜಕೀಯ ಚಿಂತನೆ ಸಾಕಷ್ಟು ಚರ್ಚೆಯಾಗಿಲ್ಲ. ಅವರ ಸಾಹಿತ್ಯ ಕೃತಿಗಳು ಚರ್ಚೆಯಾದಷ್ಟು ಅವರ ರಾಜಕೀಯ ಚಿಂತನೆಗಳ ಪುಸ್ತಕಗಳು ಚರ್ಚೆಯಾಗಿಲ್ಲ.

1951ರಲ್ಲಿ ಪ್ರಕಟವಾದ ‘ರಾಜ್ಯಶಾಸ್ತ್ರ’ದ ಮುಂದುವರಿದ ಭಾಗವೆಂಬಂತೆ ‘ರಾಜ್ಯಾಂಗದತತ್ವಗಳು’ ಎಂಬ ಕೃತಿ 1954ರಲ್ಲಿ ಪ್ರಕಟವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಆಡಳಿತ ನೀತಿಯಲ್ಲಿ ಆದ ಸಕಾರಾತ್ಮಕ ಪಲ್ಲಟವನ್ನು ಡಿವಿಜಿಯವರಷ್ಟು ಚೆನ್ನಾಗಿ ಅರಗಿಸಿಕೊಂಡು ವಿವರಿಸಲು ಪ್ರಯತ್ನಿಸಿದ ಮತ್ತೊಬ್ಬರು ಅವರ ಕಾಲಘಟ್ಟದಲ್ಲಿ ಕಾಣಸಿಗುವುದಿಲ್ಲ ಎಂಬುದಕ್ಕೆ ಈ ಕೃತಿಯೂ ಒಂದು ಸಾಕ್ಷಿ.

ಈ ಕೃತಿಯಲ್ಲಿರುವ ಪ್ರಬಂಧದ ಆರಂಭಿಕ ರೂಪ ಬಹಳ ಹಿಂದೆ, ಅಂದರೆ 1923ರಲ್ಲಿಯೇ ಪ್ರಕಟವಾಗಿತ್ತೆಂಬ ಮಾಹಿತಿಯನ್ನು ಈ ಕೃತಿಯ ‘ಅರಿಕೆ’ಯಲ್ಲಿ ಡಿವಿಜಿ ಹೇಳುತ್ತಾರೆ.

ಅಂದರೆ ಪ್ರಜಾಪ್ರಭುತ್ವದ ಅಗತ್ಯವನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಡಿವಿಜಿ ಅರ್ಥೈಸಿಕೊಂಡಿದ್ದರು ಎಂಬುದಕ್ಕೆ ಇದು ಸಾಕ್ಷಿ. ಯೂರೋಪಿನಲ್ಲಿ ನಡೆದ ಹೊಸ ಬಗೆಯ ಆಡಳಿತ ಪದ್ಧತಿಗೆ ಸಂಬಂಧಿಸಿದ ಎಲ್ಲಾ ಚರ್ಚೆಗಳನ್ನೂ ಅಂತರ್ಗತಗೊಳಿಸಿಕೊಂಡು ಭಾರತೀಯ ಸಂದರ್ಭದಲ್ಲಿ ಅದನ್ನು ವಿವರಿಸುವ ಡಿವಿಜಿಯವರ ವಿದ್ವತ್ತು ಇಲ್ಲಿರುವ ಲೇಖನಗಳಲ್ಲಿ ಕಾಣಬಹುದು. ಇಲ್ಲಿನ ಅನೇಕ ವಿಚಾರಗಳು ಈ ಕಾಲಕ್ಕೂ ಪ್ರಸ್ತುತವಾಗಿವೆ. ಈ ಕೃತಿ ಸದ್ಯ ಆರ್ಕೈವ್ ತಾಣದಲ್ಲಿ ಲಭ್ಯವಿದೆ. ಆಸಕ್ತರು ಇಲ್ಲಿರುವ ಲಿಂಕ್ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು: https://goo.gl/8HZVw8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT