ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಾರ್ತೆ

Last Updated 12 ಜನವರಿ 2016, 7:00 IST
ಅಕ್ಷರ ಗಾತ್ರ

ವಿಟ್ಲ: ಆಧ್ಯಾತ್ಮಿಕತೆಯಿಂದ ಉನ್ನತಿಯಾ ಗಲು ಸಾಧ್ಯವಿದ್ದು, ಶ್ರದ್ಧಾಪೂರ್ವಕವಾಗಿ ನಡೆಸುವ ಕೆಲಸದಿಂದ ಯಶಸ್ಸು ಸಿಗುತ್ತದೆ. ಆಶ್ರಮಗಳು ಸಮಾಜಕ್ಕೆ ಪುಣ್ಯದ ಬೆಳಕನ್ನು ಹರಿಸಿ, ಭಗವಂತನನ್ನು ಸಾಕ್ಷಾತ್ಕರಿಸುತ್ತದೆ. ವಿದೇಶಿ ಸಂಪ್ರದಾಯದಿಂದ ಕಾಲ - ಜನರ ಜೀವನದ ರೀತಿಯಲ್ಲಿ ಬದಲಾವಣೆಯಾಗಿದೆ ಎಂದು ಮಂಗ ಳೂರು ರಾಮಕೃಷ್ಣಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದ ಜೀ ಹೇಳಿದರು.

ಅವರು ಸೋಮವಾರ ಕನ್ಯಾನದ ಭಾರತ ಸೇವಾಶ್ರಮದಲ್ಲಿ ಸ್ಥಾಪಕ ದಿ. ದೀರೇಂ ದ್ರನಾಥ ಭಟ್ಟಾಚಾರ್ಯ ಅವರ ದಿನಾಚ ರಣೆ ಹಾಗೂ ದಾನಿಗಳ ನೆರವಿನಿಂದ ₹1.55 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡ ಹಿರಿಯ ನಾಗರೀಕರ ವಸತಿ ಕಟ್ಟಡದ ಉದ್ಘಾಟನೆ ನಡೆಸಿ ಆಶೀರ್ವ ಚನ ನೀಡಿದರು.

ಶ್ರೀ ಶ್ರೀ ಸದ್ಗುರು ಸಂಗ ಭಾಗ 2 ಪುಸ್ತಕ ಬಿಡುಗಡೆಗೊಳಿಸಿದ ಬೆಂಗಳೂರಿನ ವೇದಾಂತ ಚಕ್ರವರ್ತಿ ವಿದ್ವಾನ್ ಡಾ. ಕೆ.ಜಿ.ಸುಬ್ರಾಯ ಶರ್ಮ ಮಾತನಾಡಿ ಜಗತ್ತಿಗಾಗಿ ಭಗವಂತನು ಕೊಟ್ಟ ಸಂಪ ತನ್ನು ತ್ಯಾಗ ಮಾಡುವವ ನಿಜವಾದ ಸತ್ಪುರುಷನಾಗಿರುತ್ತಾನೆ. ಮರ - ಪ್ರಾಣಿ ಗಳು ತ್ಯಾಗದ ಪಾಠವನ್ನು ಕಲಿಸಿದರೂ, ಮನುಷ್ಯ ಸ್ವಾರ್ಥಿಯಾಗಿಯೇ ಉಳಿದು ಕೊಂಡಿದ್ದಾನೆ. ಕತ್ತಲೆಯಲ್ಲಿ ಅಪಾಯ, ಕಳ್ಳತನದಂತ ಕೆಟ್ಟ ಕೆಲಸಗಳೇ ನಡೆಯು ತ್ತವೆ. ದೇವರು ಎಲ್ಲರಿಗೂ ಒಂದೇ ರೀತಿ ಬೆಳಕನ್ನು ಕೊಟ್ಟು ಒಂದೇ ಎಂದು ತೋರಿಸುತ್ತಿದ್ದರೂ, ಜನರು ಮಾತ್ರ ಭೇದ–ಭಾವದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ದಾನ ಧರ್ಮ ದಲ್ಲಿ ನಿತ್ಯ ತೊಡಗಿಕೊಂಡಾಗ ಸಂಪತ್ತು ಯಾವತ್ತೂ ಕಡಿಮೆಯಾಗುವುದಿಲ್ಲ ಎಂದರು. ಕಟ್ಟಡ ನಿರ್ಮಾಣಕ್ಕೆ ಸಹಕ ರಿಸಿದ ದಾನಿಗಳನ್ನು ಗೌರವಿಸಲಾಯಿತು. ಬೆಳಿಗ್ಗೆ ಗಣಪತಿ ಹೋಮ, ಮದ್ಯಾಹ್ನ ಶ್ರೀ ಶಿರಡಿಬಾಬಾ ಮಂದಿರದಲ್ಲಿ ಪೂಜೆ ನಡೆಯಿತು. ಸಂಜೆ ಆಶ್ರಮ ವಾಸಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಎಸ್., ಮಹೇಶ್ ರಾವಲ್ ಗುಜರಾತ್, ಸರೋಜಿನಿ ಭಟ್ಟಾಚಾರ್ಯ, ಶಂಕರ ಭಟ್ಟಾಚಾರ್ಯ, ಸರಿತಾ ಐ.ಭಟ್ ಉಪಸ್ಥಿತರಿದ್ದರು.

ವರಲಕ್ಷ್ಮೀ ಪ್ರಾರ್ಥಿಸಿದರು. ಸೇವಾ ಶ್ರಮದ ಕಾರ್ಯದರ್ಶಿ ಎಸ್ ಈಶ್ವರ ಭಟ್ ಸ್ವಾಗತಿಸಿದರು. ಮಂಗ ಳೂರು ಕೊಂಕಣಿ ವಿವಿಯ ಎಂ.ಆರ್. ಕಾಮತ್ ಪುಸ್ತಕ ಪರಿಚಯ ಮಾಡಿದರು. ಕನ್ಯಾನದ ಭಾರತ ಸೇವಾಶ್ರಮದ ಅಧ್ಯಕ್ಷ ಡಿ. ಅನಂತ ಪೈ ಮಂಗಳೂರು ವಂದಿಸಿದರು. ಮಂಗೇಶ್ ಭಟ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT