ಪ್ರೀತಿಯಿಂದ ಆಡಿದ ಪ್ರತಿ ನುಡಿಯೂ ಸಿಡಿಲಿನಂತೆ ಪರಿಣಾಮಕಾರಿ ಆಗಿರುತ್ತದೆ.

–ಸ್ವಾಮಿ ವಿವೇಕಾನಂದ
Sunday, 1 February, 2015
ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ಕನಸಿನ ಮನೆ

‘ಮಣ್ಣು’ ಆದೀತೆ ಹೊನ್ನು?

ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ 2014 ಲಾಭದಾಯಕವಾಗಿ ಇರಲಿಲ್ಲ. ಭೂಮಿ ವ್ಯವಹಾರ, ಕಟ್ಟಿದ ಮನೆಗಳ ಮಾರಾಟ, ಅಪಾರ್ಟ್‌ಮೆಂಟ್‌ ನಿರ್ಮಾಣದ ಬೃಹತ್‌ ಯೋಜನೆಗಳನ್ನು ಪೂರ್ಣಗೊಳಿಸಲು ಈ ಕ್ಷೇತ್ರದ ದಿಗ್ಗಜರೂ ತಿಣುಕಾಡಬೇಕಾಯಿತು. ಹಾಗಾಗಿ ಸಹಜವಾಗಿಯೇ ಅವರೆಲ್ಲ ಮಹತ್ವಾಕಾಂಕ್ಷೆಯ  ದಿಬ್ಬದಲ್ಲಿ ನಿಂತು 2015ರತ್ತ ಮಹದಾಸೆಯಿಂದ ನೋಡುತ್ತಿದ್ದಾರೆ.

 

ಟಿವಿ, ಫ್ರಿಜ್, ಫ್ಯಾನ್‌, ಎ.ಸಿ ಇಲ್ಲದ ಮನೆ!

ಆ ಮನೆಯಲ್ಲಿ ಪೀಠೋಪರಕಣಗಳಿಲ್ಲ, ಟಿವಿ ಇಲ್ಲ, ತಂಗಳ ಪೆಟ್ಟಿಗೆ (ಫ್ರಿಜ್) ಇಲ್ಲ, ವಾಷಿಂಗ್‌ ಮೆಷಿನ್‌ ಇಲ್ಲ. ಫ್ಯಾನುಗಳೂ ಇಲ್ಲ, ಎ.ಸಿ ಮಾತಂತೂ ಇಲ್ಲವೇ ಇಲ್ಲ...

ಮಲೆನಾಡಿನಲ್ಲಿ ಅಗ್ಗದ ಕೆಂಪುಕಲ್ಲು ಮನೆ

ಮನೆಯ ನಾಲ್ಕೂ ಪಾರ್ಶ್ವ ಜಗಲಿ ಇವೆ. ವೃತ್ತಾಕಾರದಲ್ಲಿ ಕಡೆದು ನಿಲ್ಲಿಸಿದ ಕೆಂಪು ಕಲ್ಲಿನ ಕಂಬಗಳ ಸಾಲು ಮನೆಯ ಆಕರ್ಷಣೆ ಹೆಚ್ಚಿಸಿವೆ. ಇತ್ತೀಚೆಗಷ್ಟೇ ಒಳಕೋಣೆಗಳಿಗೆ ಕಾವಿ ಬಣ್ಣ ಬಳಿಯಲಾಗಿದೆ. ಉಳಿದಂತೆ ಯಾವುದೇ ಗೋಡೆಗೂ ಸಿಮೆಂಟ್‌ ಪ್ಲಾಸ್ಟರಿಂಗ್‌ ಸೋಕಿಸುವ ಗೋಜಿಗೂ ಹೋಗಿಲ್ಲ.

ಆಕಾಶವೇ ವಿಶಾಲವಾಗಿರುವಾಗ ಎಡ ಬಲದ ಚಿಂತೆ ಏಕೆ?

ಮಹಾ ನಗರ ಬೆಂಗಳೂರಿನಲ್ಲಿ ನಿವೇಶನಗಳ ಬೆಲೆಯನ್ನು ಅಡಿಗಳಲ್ಲಿಯೇ ಕೇಳಿ ತಿಳಿಯಬೇಕು. ರಾಜಧಾನಿಯ ವಾಣಿಜ್ಯ ಪ್ರದೇಶಗಳಲ್ಲಿ, ಕೆಲವು ಪ್ರಮುಖ ಬಡಾವಣೆಗಳಲ್ಲಿಯಂತೂ ಒಂದು ಅಡಿ ನಿವೇಶನದ ಬೆಲೆ ಅರ್ಧ ಲಕ್ಷ ರೂಪಾಯಿ ವರೆಗೂ ಇದೆ.

ಆಧುನಿಕ ಮನೆಗಳಲ್ಲಿ ‘ಅಟ್ಟ’ಹಾಸ!

ಹಳ್ಳಿಯ ಹಳೆಯ ಮನೆಗಳಲ್ಲಿ  ಅಟ್ಟ ಇವೆ. ಅಡಕೆಯ ಮರವನ್ನು ಸೀಳಿ ಮಾಡಿದ ದಬ್ಬೆಯಿಂದಲೋ, ಹಳಸಿನ ಮರದ ಹಲಗೆಯನ್ನು ಬಳಸಿಯೋ ಮನೆಗಳಲ್ಲಿ ಅಟ್ಟ ನಿರ್ಮಿಸಿಕೊಳ್ಳುತ್ತಿದ್ದರು ನಮ್ಮ ಹಿರಿಯರು. ಈಗ ಕೆಲವು ಆಧುನಿಕ ಮನೆಗಳಲ್ಲಿಯೂ ಅಟ್ಟ ಮತ್ತೆ ಕಾಣಿಸಿಕೊಳ್ಳುತ್ತಿದೆ. 
 

ಗೃಹಸಾಲ ಪಡೆಯುವುದು ಹೇಗೆ?

ನಿವೇಶನ ಖರೀದಿ, ಮನೆ ನಿರ್ಮಾಣ, ಕಟ್ಟಿಸಿದ ಮನೆ ಅಥವಾ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್‌ ಖರೀದಿಗೆ ಬ್ಯಾಂಕ್‌ನಲ್ಲಿ ಗೃಹಸಾಲ ಪಡೆಯಬೇಕೆ? ಹಾಗಿದ್ದರೆ, ನೀವು  ಕೆಲವು ನಿಯಮ, ಷರತ್ತು ಪಾಲಿಸಬೇಕಿದೆ.

ಮನೆಯ ಸುಯೋಗ್ಯ ಲಕ್ಷಣ

ಮಲೆನಾಡಿನಾದ್ಯಂತ ಎಲ್ಲ ಜನಾಂಗದ ಮನೆಗಳಲ್ಲೂ ಈಗ ಒಂದು ಹೊಸ ಹೊಳಪು. ಸಾಲ ಮಾಡಿಯಾದ್ರು ಮನೆಗೆ ಬಣ್ಣ ಬಳಿಸೋಣವೆಂಬ ಭಾವ. ಬೆಟ್ಟದ ಮೇಲಿನ ಮನೆಯನ್ನೆಲ್ಲ ತಮಗಿಷ್ಟ ಬಂದಂತೆ ಸಿಂಗರಿಸಿ ತನ್ಮಯತೆ ತೋರುವ ಪುಳಕ. ಕಾರಣವಿಷ್ಟೇ, ಸಾಂಪ್ರದಾಯಿಕ ಸುಗ್ಗಿ ಹಬ್ಬದ ಸಂಭ್ರಮ ಕಣ್ತುಂಬಿಕೊಳ್ಳುವ ಕಾಲ ಹತ್ತಿರವಾಗುತ್ತಿದೆ.

ಕನಸಿನ ಮನೆಯಲ್ಲಿ ಮೆಟ್ಟಿಲುಗಳ ದೃಶ್ಯಕಾವ್ಯ

ಹಿಂದಿನ ಕಾಲದ ಮನೆಗಳಲ್ಲಿ ಮೆಟ್ಟಿಲುಗಳು ಮೇಲು ಅಂತಸ್ತಿಗೆ, ಅಟ್ಟಕ್ಕೆ ಹತ್ತಲಷ್ಟೆ ಇರುವಂತಹವು ಎಂಬ ಭಾವನೆ ಇತ್ತು. ಆದರೆ ಈಗ ಮೆಟ್ಟಿಲುಗಳು ಕೂಡ ಇಂಟೀರಿಯರ್ ಡೆಕೊರೇಷನ್‌ನ ಅವಿಭಾಜ್ಯ ಅಂಗವಾಗಿವೆ.

ಮನೆಯೊಳಗೆ ಮುದ್ದು ಪ್ರಾಣಿಗೊಂದು ಗೂಡು

ಕನಸಿನ ಮನೆ ಎಂದೊಡನೇ ಅದು ಕೇವಲ ಮನುಷ್ಯರಿಗೇ ಆಗಬೇಕೆಂದೇನೂ ಇಲ್ಲ. ಮನೆ ಮಂದಿಯ ಮುದ್ದಿನ ಸಾಕು ಪ್ರಾಣಿಗೂ ಒಂದು ಸೂರು ಬೇಕಲ್ಲವೇ? ನೆಚ್ಚಿನ ಪ್ರಾಣಿಗೆ ಹೆಚ್ಚೇನೂ ಖರ್ಚಿಲ್ಲದೆ, ಸುಲಭ­ದಲ್ಲಿ ಸುಂದರ ಮನೆಯೊಂದನ್ನು ನಿರ್ಮಿಸುವ ಬಗೆ ಹೇಗೆ? ಇಲ್ಲಿದೆ ಕೆಲವು ಸಲಹೆ...
 

ಮನೆಯ ಈ ಸ್ವಭಾವ ಕಂಡಿರಾ!

ಕೆಲವು ಮನೆಯನ್ನು ನೋಡಿದಾಗ, ನೆನೆದಾಗಲೆಲ್ಲಾ ಏನೋ ಒಂದು ಸೆಳೆತ, ಆತ್ಮೀಯ ಭಾವ. ಆ ಮನೆಯ ಮೆಟ್ಟಿಲುಗಳು ನಮ್ಮನ್ನೇ ಕಾಯುತ್ತಿವೆಯೋ ಏನೋ ಎಂಬಂತೆ. ಯಾವುದೋ ಸಂಗೀತದ ರಾಗವನ್ನು ಸದಾ ಗುನುಗುತ್ತಿರುವಂತಿರು ಆ ಮನೆಯ ಜಗುಲಿ. ಕೆಲವು ಮನೆಯನ್ನು ಇದೇ ಪ್ರಥಮ ಬಾರಿಗೆ ನೋಡುತ್ತಿದ್ದರೂ ಹಳೆ ಗೆಳತಿಯನ್ನು ಮತ್ತೆ ಭೇಟಿಯಾಗುವಂತಹ ಸಲುಗೆ. ‘ಸ್ವಭಾವ’ ಎಂದಾಕ್ಷಣ ಮನುಷ್ಯರು ಅಥವಾ ಪಶು- ಪಕ್ಷಿಗಳ ಚಿತ್ರಣ ಬರುತ್ತದೆ.
 

ಮನೆ ಬೇಡಿಕೆ ಇಳಿಮುಖ; ಸಮಯ ಕಾಯುತ್ತಿರುವ ಗ್ರಾಹಕ

ದೇಶದ ರಿಯಲ್‌ ಎಸ್ಟೇಟ್ ಅಭಿವೃದ್ಧಿ ಉದ್ಯಮ ಕ್ಷೇತ್ರವೇನೋ ಹೊಸದಾಗಿ ಬಂಡವಾಳ ಹರಿದುಬರಲು ಅವಕಾಶವಾಗಿರುವುದರಿಂದ ಬಹಳ ಹಿಗ್ಗಿನಲ್ಲಿದೆ. ಆದರೆ, ನಿರ್ಮಾಣಗೊಂಡ ಮನೆಗಳು, ವಸತಿ ಸಂಕೀರ್ಣಗಳು ಮಾರಾಟವಾಗದೇ ಉಳಿಯುತ್ತಿ ರುವುದು ಕಂಪೆನಿಗಳ ಚಿಂತೆಯನ್ನು ಹೆಚ್ಚಿಸಿದೆ.

ಒಳಾಂಗಣ ವಿನ್ಯಾಸಕ್ಕೆ ಮರದ ನೆಲಹಾಸು

ಮನೆಯೊಂದರ ನಿರ್ಮಾಣ  ತಾರಸಿಯ ಕೆಲಸದೊಂದಿಗೆ ಅರ್ಧಾಂಶದಷ್ಟು ಮುಗಿದಿದೆ. ಇಷ್ಟರವರೆಗೂ ವೆಚ್ಚವಾಗಿದ್ದಕ್ಕಿಂತ ತುಸು ಹೆಚ್ಚೇ ಹಣ ಮುಂದಿನ ಕೆಲಸಗಳಾದ ನೆಲದ ಹೊದಿಕೆ, ಮರಗೆಲಸ, ವಿದ್ಯುತ್‌ ವೈರಿಂಗ್‌, ನೀರು ಸರಬರಾಜು ನಲ್ಲಿ ಜೋಡಣೆ, ಗಾರೆ, ಸುಣ್ಣ, ಬಣ್ಣಗಳಿಗೆ ಖರ್ಚಾಗುತ್ತದೆ.

Pages