ಮನುಷ್ಯನ ಅಂತಃಕರಣದಲ್ಲಿ ಸಾತ್ವಿಕತೆಯ ಜ್ಯೋತಿಯನ್ನು ಜಾಗೃತಗೊಳಿಸುವುದು ಕರುಣೆ.

–ಕುವೆಂಪು
Tuesday, 24 May, 2016

ಬೆಂಗಳೂರು

ಸಚಿವರಿಂದ ಸ್ವಜನಪಕ್ಷಪಾತ: ಆಕ್ರೋಶ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ  ಗೋನಾಳ್‌ ಭೀಮಪ್ಪ ಅವರ ರಕ್ಷಣೆಗೆ ಬದ್ಧ ಎಂಬ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಹೇಳಿಕೆಗೆ ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ ಹೆಗ್ಡೆ ಹಾಗೂ ಭೂಕಬಳಿಕೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಹಾ ವ್ಯಾಪಾರಿಯ ಮಗಳಿಗೆ ಶೇ 98 ಅಂಕ

ಚಹಾ ಅಂಗಡಿಯ ವ್ಯಾಪಾರಿಯೊಬ್ಬರ ಪುತ್ರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೆ 98.08  (613) ಅಂಕಗಳನ್ನು ಪಡೆಯುವ ಮೂಲಕ ಬಡತನದಲ್ಲಿಯೂ ಸಾಧನೆ ಮೆರೆದಿದ್ದಾಳೆ.

ಚತುರ ಸಾರಿಗೆ ವ್ಯವಸ್ಥೆ: ನಾಳೆ ಚಾಲನೆ

ಬಿಎಂಟಿಸಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸಿ, ಆದಾಯದಲ್ಲಿ ಗಣನೀಯ ಹೆಚ್ಚಳ ಮಾಡುವ ಉದ್ದೇಶ ಹೊಂದಿರುವ  ‘ಚತುರ ಸಾರಿಗೆ ವ್ಯವಸ್ಥೆ (‘ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌–ಐಟಿಎಸ್‌’)  ಬುಧವಾರದಿಂದ ಜಾರಿಗೆ ಬರಲಿದೆ.

ಸಚಿವ ಆಂಜನೇಯ ಹೇಳಿಕೆಗೆ ಉಮಾಶ್ರೀ ಬೆಂಬಲ

ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಕೇಂದ್ರಗಳಿಗಿಂತ ಕಡೆಯಾಗಿವೆ’ ಎಂಬ  ಸಚಿವ ಎಚ್.ಆಂಜನೇಯ ಅವರ ಹೇಳಿಕೆಯ ಹಿಂದಿನ  ವಿಚಾರ ಸರಿಯಾಗಿದೆ. ಆದರೆ, ಅವರ ಪದ ಬಳಕೆ ಸರಿಯಾಗಿಲ್ಲ ಅಷ್ಟೆ’ ಎಂದು ಸಚಿವೆ ಉಮಾಶ್ರೀ ಸಮರ್ಥಿಸಿಕೊಂಡರು.

ವಾಹನ ನಿಲುಗಡೆ ನಿರ್ಬಂಧ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ (ಮೇ 24) ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿರುವ ಕಾರಣ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30ರವರೆಗೆ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.

ಕ್ರಿಕೆಟ್‌ ಬೆಟ್ಟಿಂಗ್ ದಂಧೆ: ಬಂಧನ

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ದಿನೇಶ್ ಜೈನ್ (49) ಎಂಬಾತನನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ  (ಸಿಸಿಬಿ) ಪೊಲೀಸರು, ₹ 2.24 ಲಕ್ಷ ನಗದು, ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬಸ್‌ ಹರಿದು ಮೆಕ್ಯಾನಿಕ್‌ ಸಾವು

ಕೆ.ಆರ್.ಪುರದ ಮೇಲ್ಸೇತುವೆ ಬಳಿ ಸೋಮವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್‌ ಸವಾರ ಸುಭಾಷ್‌ (21) ಎಂಬುವವರು ಮೃತಪಟ್ಟಿದ್ದಾರೆ.

ಕಿಟಕಿ ಮುರಿದು ನಗದು, ಒಡವೆ ಕಳವು

ಅಮೃತಹಳ್ಳಿ ಸಮೀಪದ ಜಕ್ಕೂರಿನ ಉಪೇಕ್ಷ್‌ ಪ್ರಧಾನ್ ಎಂಬುವವರ ಮನೆಯಲ್ಲಿ ದುಷ್ಕರ್ಮಿಗಳು ಕಿಟಕಿ ಮುರಿದು ಒಳಗೆ ನುಗ್ಗಿ, ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.

ಚಾಕುವಿನಿಂದ ಇರಿದು ಕೊಲೆ

ಬನಶಂಕರಿ ಸಮೀಪದ ಕಾವೇರಿನಗರದ ಕೊಳೆಗೇರಿಯಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ಅಕ್ರಮ್‌ (30) ಎಂಬುವವರನ್ನು   ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಬಿಜೆಪಿಗೆ ಒಲಿದ ಹೆಬ್ಬಗೋಡಿ ನಗರಸಭೆ

ಆನೇಕಲ್‌ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪುಷ್ಪಲತಾ ಉಮೇಶ್ ಅಧ್ಯಕ್ಷರಾಗಿ ಹಾಗೂ ಶ್ರೀನಿ ವಾಸ್‌ ರೆಡ್ಡಿ ಉಪಾಧ್ಯಕ್ಷರಾಗಿ ಚುನಾಯಿತ ರಾಗುವ ಮೂಲಕ ತಾಲ್ಲೂಕಿನ ಏಕೈಕ ನಗರಸಭೆಯ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು.

28ರಂದು ಉದ್ಯೋಗ ಮೇಳ

‘ಡಾನ್ ಬಾಸ್ಕೊ ಟೆಕ್  ಸೊಸೈಟಿ ಸಂಸ್ಥೆಯು ಬನ್ನೇರುಘಟ್ಟ ರಸ್ತೆಯ ಸಂಸ್ಥೆ ಆವರಣದಲ್ಲಿ ಮೇ 28ರಂದು ‘ಉದ್ಯೋಗ ಮೇಳ’ವನ್ನು ಆಯೋಜಿಸಿದೆ’ ಎಂದು ಸಂಸ್ಥೆಯ ಸಹಾಯಕ ಕಾರ್ಯಕ್ರಮ ನಿರ್ದೇಶಕ ರಮೇಶ್‌ ಚೆರಿಯನ್ ತಿಳಿಸಿದರು.

Pages