Wednesday, 26 April, 2017

ಭವಿಷ್ಯ

ಮೇಷ

ಕಳೆದುಹೋದ ವಸ್ತು ಅಥವಾ ಬಹುದಿನಗಳಿಂದ ಬರಬೇಕಾಗಿದ್ದ ವಸ್ತು ಗಳನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ವಾಹನ, ಯಂತ್ರೋಕಪರಣಾದಿ ಚರ ಆಸ್ತಿಗಳ ಖರೀದಿ ಮಾಡಲಿದ್ದೀರಿ.

ವೃಷಭ

ಸಂಬಂಧಿಕರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಹೊಸ ಉದ್ಯಮದ ಸಂಭ್ರಮದ ತಯಾರಿ ನಡೆಸಲಿದ್ದೀರಿ.

ಮಿಥುನ

ನಿತ್ಯದ ಕೆಲಸಗಳಲ್ಲದೇ ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವ ಧಾವಂತದಲ್ಲಿರುವಿರಿ. ನೆಮ್ಮದಿಯ ವಾತಾವರಣಕ್ಕೆ ಕಾರಣರಾಗಲಿದ್ದೀರಿ. ಮನೆಯವರೊಂದಿಗೆ ಆತುರದ ವ್ಯವಹಾರ ತೋರುವುದು ತರವಲ್ಲ.

ಕಟಕ

ಆಸ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆ. ವಾಹನ ರಿಪೇರಿ, ಮಾರಾಟಗಾರರಿಗೆ ಉತ್ತಮ ವ್ಯವಹಾರ ನಡೆದು ಹೆಚ್ಚಿನ ಆದಾಯ ತಂದುಕೊಡಲಿದೆ. ಕಾನೂನಿಗೆ ಸಂಬಂಧಿಸಿದ ವಿಷಯದಲ್ಲಿ ಸೂಕ್ತ ಸಲಹೆ ಪಡೆಯಿರಿ.

ಸಿಂಹ

ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನಿಮ್ಮದಾಗಲಿದೆ. ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ ಮೂಡಲಿದೆ. ವಿವಾಹಾದಿ ಶುಭಕಾರ್ಯಗಳಲ್ಲಿ ಮನೆಯವರೊಂದಿಗೆ ಸಕ್ರಿಯಭಾಗಿಯಾಗುವಿರಿ.

ಕನ್ಯಾ

ಕ್ರೀಡಾಪಟುಗಳಿಗೆ ಉತ್ತೇಜನ ದೊರಕುವ ಸಂಭವವಿದ್ದು ಉತ್ತಮ ಸಾಧನೆ ತೋರಲಿದ್ದೀರಿ. ಸಾಧನೆಯ ಪುಟಗಳನ್ನು ಅವಲೋಕನ ಮಾಡಿಕೊಳ್ಳಲಿದ್ದೀರಿ. ವಾಹನ ವ್ಯವಹಾರಗಳಿಂದ ವಿಶೇಷ ಲಾಭ ಗಳಿಸಲಿದ್ದೀರಿ.

ತುಲಾ

ಹೊಸಬರಿಗೆ ಬರವಣಿಗೆ, ಸಾಹಿತ್ಯ ಅಥವಾ ಅನುವಾದಗಳ ಕೆಲಸಗಳಿಗೆ ಉತ್ತೇಜನ ನೀಡಲಿದ್ದೀರಿ. ಮನೆಯ ಕೆಲಸ ಕಾರ್ಯಗಳ ಜವಾಬ್ದಾರಿಯಿಂದ ಮುಕ್ತರಾಗಿ ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವಿರಿ.

ವೃಶ್ಚಿಕ

ವರಮಾನದಲ್ಲಿ ಗಣನೀಯ ಸುಧಾರಣೆ ಕಂಡುಬರುವುದು. ವಿದೇಶದಿಂದ ಮಕ್ಕಳ ಅಥವಾ ಸಮೀಪ ಬಂಧುಗಳ ಆಗಮನಕ್ಕಾಗಿ ಎದುರು ನೋಡುವಿರಿ. ಗೃಹಾಲಂಕಾರ ವಸ್ತುಗಳ ಖರೀದಿ ಸಾಧ್ಯತೆ ಕಂಡುಬರುವುದು.

ಧನು

ಸಾಹಿತ್ಯ, ಸಂಗೀತ ಕಲಾ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳೊಡನಾಟ ದಿನವಿಡೀ ದೊರಕುವ ಸಾಧ್ಯತೆ . ರಿಯಲ್ ಎಸ್ಟೇಟ್‌ನಂತಹ ಭೂ ಸಂಬಂಧಿ ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ಗಳಿಸುವಿರಿ.

ಮಕರ

ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ. ಶ್ರೀಮಂತ ಜೀವನದ ಶೈಲಿಗಾಗಿ ವೆಚ್ಚ ಭರಿಸಲಿದ್ದೀರಿ. ಸೋದರಿಯರ ವಿಚಾರದಲ್ಲಿ ಧಾರಾಳತನ. ಸಂಪನ್ಮೂಲಗಳ ವೃದ್ಧಿಗಾಗಿ ಹೊಸ ಯೋಜನೆ.

ಕುಂಭ

ಮನೆಯಲ್ಲಿ ಮೃದುಭಾಷಿಯಾಗಿ ವ್ಯವಹರಿಸಿ ಕೆಲಸಗಳ ನಿಧಾನಗತಿಯಲ್ಲಿದ್ದರೂ ಮನಸ್ಸಿನಲ್ಲಿನ ದುಗುಡವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ದೂರದ ಸಂಬಂಧಿಕರೊಬ್ಬರ ಆಗಮನ ಸಾಧ್ಯತೆ.

ಮೀನ

ಆದಾಯದಲ್ಲಿ ಹೆಚ್ಚಳವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ದಾಂಪತ್ಯ ಜೀವನ ಸುಖಕರವಾಗಿರುವುದು. ಸರ್ಕಾರಿ ನೌಕರರಿಗೆ,ಉನ್ನತ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ.