ಮೋಡ ಕವಿದ ಬೇರೆಯವರ ಬದುಕಿನಲ್ಲಿ ಕಾಮನಬಿಲ್ಲಾಗಲು ಯತ್ನಿಸಿ.

–ಮಾಯಾ ಏಂಜೆಲೊ
Saturday, 28 March, 2015

28 ಸಾವಿರಕ್ಕೂ ಹೆಚ್ಚು ಉಗ್ರ ವಿರೋಧಿ ಕಾರ್ಯಾಚರಣೆ...ವಿವಿಧ ಆರೋಪಗಳಡಿ 32 ಸಾವಿರಕ್ಕೂ ಅಧಿಕ ಜನರ ಬಂಧನ...62 ಅಪರಾಧಿಗಳು ಗಲ್ಲಿಗೆ... – ಇದೆಲ್ಲವೂ ನಡೆದಿದ್ದು ಪಾಕಿಸ್ತಾನದಲ್ಲಿ. 2014ರ ಡಿಸೆಂಬರ್ 16ರಂದು ಪೆಶಾವರ ಸೇನಾ ಶಾಲೆ ಮೇಲಿನ ದಾಳಿ ನಂತರ ಪಾಕಿಸ್ತಾನ ಭದ್ರತಾ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆ ಎಂಬುದು ವಿಶೇಷ.

ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡಲು ಆಸ್ಟ್ರೇಲಿಯಕ್ಕೆ ತೆರಳಿದ್ದ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್ ತಂಡ ತವರಿಗೆ ಮರಳಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ದೋನಿ ಅವರು ನವದೆಹಲಿಯಲ್ಲಿ ಇಳಿದರೆ, ಕೊಹ್ಲಿ ಅವರು ತಮ್ಮ ಗೆಳತಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಶುಕ್ರವಾರ ತಡರಾತ್ರಿ ಮುಂಬೈ ತಲುಪಿದ್ದಾರೆ.

ಆಮ್ ಆದ್ಮಿ ಪಕ್ಷದ ಆಂತರಿಕ ಕಚ್ಚಾಟವನ್ನು ಹಲವು ಪಕ್ಷಗಳು ಟೀಕಿಸಿವೆ. ಎಎಪಿ ‘ಬಾಲಿಶ’ ರಾಜಕಾರಣದಿಂದ ಅವಕಾಶ ವ್ಯರ್ಥಮಾಡುವುದನ್ನು ಬಿಟ್ಟು, ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಸಲಹೆ ನೀಡಿದ್ದಾರೆ.

ಲಂಡನ್‌ನಿಂದ ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವೊಂದರಲ್ಲಿ ’ಅಪಹರಣದ ವಿಫಲ ಯತ್ನ’ ನಡೆದಿತ್ತು ಎಂಬ ಕೆಲ ಮಾಧ್ಯಮಗಳ ವರದಿಯನ್ನು ಏರ್‌ ಇಂಡಿಯಾ ಹಾಗೂ ವಿಮಾನಯಾನ ಅಧಿಕಾರಿಗಳು ಶನಿವಾರ ಅಲ್ಲಗಳೆದಿದ್ದಾರೆ.

ಉಗ್ರರನ್ನು ಹೊಡೆದುರುಳಿಸಿರುವ ಸೋಮಾಲಿಯ ಭದ್ರತಾ ಪಡೆ ಉಗ್ರರ ವಶದಲ್ಲಿದ್ದ ಹೊಟೇಲ್ ಅನ್ನು ಶನಿವಾರ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ 17 ಮಂದಿ ಸಾವಿಗೀಡಾಗಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ನಡುವೆ ಸುಳಿವಾತ್ಮ...

ತಾವು ಮಾಡದ ತಪ್ಪಿಗೆ ಕುಟುಂಬ ಮತ್ತು ಸಮಾಜದ ನಿರ್ಲಕ್ಷ್ಯ, ಅವಮಾನಕ್ಕೆ ಈಡಾಗುತ್ತಾರೆ ಮಂಗಳಮುಖಿಯರು. ಕಾಡಿ–ಬೇಡುವುದನ್ನೇ ಬದುಕಾಗಿಸಿ ಕೊಳ್ಳುವವರದ್ದೇ ಸಿಂಹಪಾಲು. ಆದರೆ ಪದ್ಮಿನಿ ಪ್ರಕಾಶ್‌  ತಮಿಳಿನ ಲೋಟಸ್‌ ಟಿ.ವಿ.ಯಲ್ಲಿ ವಾರ್ತಾ ವಾಚಕಿ. 

*ಪದ್ಮಿನಿ ‘ಪ್ರಕಾಶ’

ಎಷ್ಟೋ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಹಜ. ಅದು ಸಹಜ ಎಂಬ ಕಾರಣಕ್ಕೇ ಅದರೆಡೆಗೆ ನಿರ್ಲಕ್ಷ್ಯವೂ ಬೆಳೆದಿರುತ್ತದೆ. ಆದರೆ ಇದು ಮತ್ತೊಂದು ಸಮಸ್ಯೆಯ ಮೂಲವೂ ಆಗಿರಬಹುದು. 

ಅರುಣ್ ಭಟ್ ಅವರ ಛಾಯಾಚಿತ್ರಕ್ಕೆ ಪ್ರತಿಷ್ಠಿತ ಹಮ್ದನ್ ಬಿನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಹವ್ಯಾಸವಾಗಿ ಒಡಮೂಡಿದ ‘ಫೋಟೊಗ್ರಫಿ’ ಬದುಕಾಗಿ, ಕನಸಾಗಿ ಜೀವಕ್ಕೆ ಜತೆಯಾದ ಬಗ್ಗೆ ಅವರು ಇಲ್ಲಿ ಹೇಳಿಕೊಂಡಿದ್ದಾರೆ. ‘ಒಂದು ಚಿತ್ರ, ನೂರು ಸಾಲಿಗೆ ಸಮ’ ಎನ್ನುವ ಮಾತಿದೆ. ಪ್ರತಿಷ್ಠಿತ ಹಮ್ದನ್ ಬಿನ್ ಪ್ರಶಸ್ತಿಗೆ ಆಯ್ಕೆ ಆಗಿರುವ ನಗರದ ಅರುಣ್ ಭಟ್ ಅವರ ಈ ಒಂದು ಚಿತ್ರ ನೂರು ಭಾವಗಳ ಅನುಭವವನ್ನು ಕಣ್ಮುಂದೆ ಕಟ್ಟುತ್ತದೆ.

ಆಮ್‌ ಆದ್ಮಿ ಪಕ್ಷದ ಮುಖಂಡರ ನಡುವಣ ಕಿತ್ತಾಟ ಭಿನ್ನ ಸ್ವರೂಪ ಪಡೆದಿದೆ. ನಿರೀಕ್ಷೆಯಂತೆ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಿಂದ ಎಎಪಿ ಕೈಬಿಟ್ಟಿದೆ. ಆದರೆ, ಈ ಸಭೆಯಲ್ಲಿ ‘ದುಂಡಾವರ್ತನೆ ನಡೆದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಯಾದವ್ ಹಾಗೂ ಭೂಷಣ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಈ ಆರೋಪವನ್ನು ಎಎಪಿ ಅಲ್ಲಗಳೆದಿದೆ.

ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದ ಮಿಜೋರಾಂ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ಶನಿವಾರ ಉಚ್ಛಾಟನೆಗೊಳಿಸಲಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರಾಷ್ಟ್ರಪತಿ ಭವನ, ‘ಖುರೇಷಿ ಅವರು ಮಿಜೋರಾಂ ರಾಜ್ಯಪಾಲರ ಕಾರ್ಯಭಾರವನ್ನು ನಿಲ್ಲಿಸಬೇಕು’ ಎಂದು ಹೇಳಿದೆ.

ಆಮ್‌ ಆದ್ಮಿ ಪಕ್ಷದ ಆಂತರಿಕ ಕಚ್ಚಾಟಗಳು ತಾರಕಕ್ಕೇರಿದ ಬೆನ್ನಲ್ಲೆ ಹಿರಿಯ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಪಕ್ಷ ಬಿಟ್ಟು ಹೊರ ನಡೆದಿದ್ದಾರೆ. ‘ದೆಹಲಿಯಲ್ಲಿ ಶನಿವಾರ ಎಎಪಿ ಸಭೆಯಲ್ಲಿ ನಡೆದಿರುವ ಘಟನೆ ದುರದೃಷ್ಟಕರ’ ಎಂದು ಎಎಪಿ ತೊರೆದ ಬಳಿಕ ಸುದ್ದಿಗಾರರಿಗೆ ಪಾಟ್ಕರ್ ತಿಳಿಸಿದರು.

ದೇಶದ ಆರ್ಥಿಕತೆಯ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಯು ಮುಂಬರುವ ತಮ್ಮ ವಿದೇಶಿ ಪ್ರವಾಸದ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಿಳಿಸಿದ್ದಾರೆ. ಮೋದಿ ಅವರು ಫ್ರಾನ್ಸ್‌, ಜರ್ಮನಿ ಹಾಗೂ ಕೆನಡ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದು, ಏಪ್ರಿಲ್ 9ರಂದು ಪ್ರವಾಸ ಆರಂಭಗೊಳ್ಳಲಿದೆ.

ರಾಜ್ಯ  

‘ನಾನು ಇನ್ನಷ್ಟು ಓದಬೇಕು. ಪರೀಕ್ಷೆ ಇಲ್ಲೇ ಬರೆಯುತ್ತೇನೆ. ಅಮ್ಮಾ... ನೀನು ಅಳಬೇಡ... ನಾನು ಆರಾಮ ವಾಗಿದ್ದೇನೆ....’  ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದ ಹಾಸಿಗೆಯ ಮೇಲೆ ಮಲಗಿಕೊಂಡೇ ಶುಕ್ರವಾರ 5ನೇ ತರಗತಿಯ ಸಮಾಜ ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದ ಬಾಲಕಿ ಯಶಸ್ವಿ ಹೀಗೆ ಹೇಳಿ ಅಮ್ಮನಿಗೆ ಧೈರ್ಯ ತುಂಬುತ್ತಿದ್ದಳು.

ಜಿಲ್ಲೆ  

ಕೆಲವು ಮಾತ್ರ ಹೊಸ ಘೋಷಣೆಗಳಿರುವ ನಗರಸಭೆಯ 2015­–16ನೇ ಸಾಲಿನ ಮುಂಗಡ ಪತ್ರವನ್ನು ಅಧ್ಯಕ್ಷ ಪಿ. ಯುವರಾಜ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಒಟ್ಟು₹83.56 ಕೋಟಿ ಆದಾಯ ಮತ್ತು 82.35 ಲಕ್ಷ ವೆಚ್ಚವನ್ನು ಬಜೆಟ್‌ ಒಳಗೊಂಡಿದೆ.

ರಾಷ್ಟ್ರೀಯ  

ದೇಶದಾದ್ಯಂತ ಸುಮಾರು 2.8 ಲಕ್ಷ  ಗ್ರಾಹಕರು ಅಡುಗೆ ಅನಿಲ ಸಬ್ಸಿಡಿ ಹಿಂತಿರುಗಿಸುವ ನಿರ್ಧಾರ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕ್ರೀಡೆ  

ಹನ್ನೊಂದನೇ ಐಸಿಸಿ ಏಕದಿನ ವಿಶ್ವಕಪ್  ಟೂರ್ನಿಯಲ್ಲಿ ಯಾರು ಫೈನಲ್‌ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಈಗ ತಣಿದು ಹೋಗಿದೆ. ಟೂರ್ನಿಗೆ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳೇ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು, ಟ್ರೋಫಿ ಯಾರ ಮಡಿಲು ಸೇರಲಿದೆ ಎನ್ನುವ ಚರ್ಚೆ ಜೋರಾಗಿಯೇ ನಡೆದಿದೆ.
 

ವಾಣಿಜ್ಯ  

2014–15ನೇ ಸಾಲಿನಲ್ಲಿ ಕೇಂದ್ರ ಬಿಡುಗಡೆ ಮಾಡಿದ ಶೇ 51ರಷ್ಟು ಅನುದಾನವನ್ನಷ್ಟೇ ಬಳಸಿಕೊಂಡಿರುವುದಕ್ಕೆ ಕಾರಣ
ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು
- ಅನಂತಕುಮಾರ್, ಕೇಂದ್ರ ಸಚಿವ

ವಿದೇಶ  

ಫ್ರೆಂಚ್‌ ಆಲ್ಪ್ಸ್ ಪರ್ವತಕ್ಕೆ ಅಪ್ಪಳಿಸಿ, 150 ಜನರನ್ನು ಬಲಿ ತೆಗೆದುಕೊಂಡ ಜರ್ಮನಿಯ ಏರ್‌­ಬಸ್‌ ಎ320 ವಿಮಾನದ ಸಹ ಪೈಲಟ್‌ ಆ್ಯಂಡ್ರಿಯಾಸ್‌ ಲುಬಿಟ್ಜ್‌ (28) ಮಾನಸಿಕ ಖಿನ್ನತೆಗೆ ಒಳಗಾಗಿದ್ದ  ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.