ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನಾಚರಣೆ

ಹಿಂದುಳಿದವರ ಏಳಿಗೆಗೆ ಶಿಕ್ಷಣವೇ ಅಸ್ತ್ರ

ಹಿಂದುಳಿದ ಸಮುದಾಯಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶಿಗ್ಗಾವಿ ಪಟ್ಟಣದಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನಾಚರಣೆ ನಡೆಯಿತು

ಶಿಗ್ಗಾವಿ: ಬಡ ಕೂಲಿಕಾರರು, ದೀನ ದಲಿತರ ಹಾಗೂ ಹಿಂದುಳಿದ ಸಮುದಾಯಗಳ ಏಳಿಗೆಗೆ ಶಿಕ್ಷಣವೇ ಅಸ್ತ್ರ. ಪಾಲಕರು ಜಾಗೃತರಾಗುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಕಾಳೆ ಹೇಳಿದರು.

ಪಟ್ಟಣದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ, ಜೀವಿಕ ಜೀತ ವಿಮುಕ್ತಿ ತಾಲ್ಲೂಕು ಘಟಕ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಹಾಗೂ ಮಾನವ ಹಕ್ಕುಗಳ ಹಾಗೂ ಭ್ರಷ್ಠಾಚಾರ ನಿರ್ಮೂಲನಾ ಸಂಘಟನೆ ಸಹಯೋಗದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 61ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ಸಮುದಾಯಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ. ಅದು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಉಡುಪಿಯ ಪೇಜಾವರ ಶ್ರೀ, ಪ್ರತಾಪ್ ಸಿಂಹ, ಗೋ. ಮಧುಸೂಧನ ನೀಡಿದ ಹೇಳಿಕೆಗಳು ಅಂಬೇಡ್ಕರ್, ಕಿತ್ತೂರ ಚನ್ನಮ್ಮ ಹಾಗೂ ಓಬವ್ವ ಅವರಿಗೆ ಮಾಡಿದ ಅವಮಾನದಂತಿವೆ. ಅವರ ವಿರುದ್ಧ ಕಠಿಣ ಕಾನೂನು ಕಠಿಣ
ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಕೀಲ ಬಸವರಾಜ ಜಕ್ಕಿನಕಟ್ಟಿ, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಮನುಕುಲದ
ಸರ್ವಾಂಗೀಣ ಏಳಿಗೆಯನ್ನು ಒಳಗೊಂಡಿದೆ. ಅವರ ಆಸೆಯಗಳಂತೆ ನಡೆದಾಗ ಯಶಸ್ವಿ ಬದುಕು ಸಾಗಿಸಲು ಸಾಧ್ಯವಿದೆ. ಕಾನೂನಿನ ವಿಚಾರಗಳನ್ನು ತಿಳಿಯುವ ಮೂಲಕ ಸಮಾನತೆ ನಿಟ್ಟಿನಲ್ಲಿ ನಡೆದಾಗ ಬದುಕು ಅರ್ಥಪೂರ್ಣವಾಗಲು ಸಾಧ್ಯ ಎಂದರು.

ಮುಖಂಡರಾದ ಸುರೇಶ ಹರಿಜನ, ಜೀಲಾನಿ ಜಂಗ್ಲಿ, ಯಲ್ಲಪ್ಪ ತೊಂಡೂರ, ನಾಜೀರ್‌ಸಾಬ ಸವಣೂರ, ಮಹ್ಮದಹನಿಫ್ ಗುಲ್ಮಿ, ಉಮೇಶ ಬೆನಕನಹಳ್ಳಿ, ಮಹ್ಮದ ದಿವಾನವರ, ಗಣೇಶ ಚಲವಾದಿ, ಬಸವರಾಜ ಹಂಚಿನಮನಿ ಹಾಗೂ ಸುಭಾಸ ಇಂದ್ರಕರ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅಣ್ಣಾ ಹಜಾರೆ ಬೆಂಬಲಿಸಿ ಧರಣಿ

ಹಾವೇರಿ
ಅಣ್ಣಾ ಹಜಾರೆ ಬೆಂಬಲಿಸಿ ಧರಣಿ

24 Mar, 2018

ಶಿಗ್ಗಾವಿ
ಕುಡಿಯುವ ನೀರು ಉಚಿತ ಪೂರೈಕೆ

‘ಸುಡು ಬಿಸಿಲಿನಲ್ಲಿ ಉಚಿತವಾಗಿ ನೀರು ದಾನ ಮಾಡುವ ಕಾರ್ಯಕ ಸರ್ವಶ್ರೇಷ್ಠವಾದುದಾಗಿದೆ. ಇಂತಹ ಸೇವೆ ಮಾಡುತ್ತಿರುವ ಭರತ ಸೇವಾ ಸಮಿತಿ ಕಾರ್ಯ ಶ್ಲಾಘನೀಯ’ ಎಂದು ಚಂದ್ರಶೇಖರಯ್ಯ...

24 Mar, 2018
ಮಾವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ಹಾವೇರಿ
ಮಾವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

24 Mar, 2018
ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

ರಾಣೆಬೆನ್ನೂರು
ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

23 Mar, 2018

ರಾಣೆಬೆನ್ನೂರು
‘ನರೇಗಾ ಯೋಜನೆ: ಸಮಾನ ಕೂಲಿ’

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಿಂದ ಮಹಿಳೆ ಹಾಗೂ ಪುರುಷರಿಗೆ ಸಮಾನ ವೇತನ ದೊರೆಯುತ್ತಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ...

23 Mar, 2018