ಸಂಡಿಗೆ ವೈವಿಧ್ಯ

ಬೇಸಿಗೆ ಮುಗಿಯುವುದರೊಳಗೆ ಮಳೆಗಾಲದಲ್ಲಿ ಕಾಫಿ-ಚಹಾದೊಂದಿಗೆ ಚಪ್ಪರಿಸಲು ಬೇಕಾಗುವ ಸಂಡಿಗೆ-ಹಪ್ಪಳಗಳನ್ನು ಮಾಡಿ ಶೇಖರಿಸಿಟ್ಟುಕೊಳ್ಳಿ...

ಮಲ್ಲಿಗೆ ಸಂಡಿಗೆ
ಬೇಕಾಗುವ ಪದಾರ್ಥ:
ಅಕ್ಕಿ 1 ಲೋಟ, ನೀರು 7 ಲೋಟ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು 4 ಗಂಟೆಗಳ ಕಾಲ ನೆನಿಸಿ ನುಣ್ಣಗೆ ರುಬ್ಬಿ ದಪ್ಪ ತಳ ಪಾತ್ರೆಯಲ್ಲಿ ನೀರಿಗೆ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಕೈಬಿಡದೆ ಆಡಿಸುತ್ತಿರಬೇಕು. ಗಟ್ಟಿಯಾದ ನಂತರ ಹಿಟ್ಟನ್ನು ಮೂರು ಬೆರಳಿನಲ್ಲಿ ಮೇಲೆ ಸ್ವಲ್ಪ ಚೂಪಾಗಿ ಬರುವಂತೆ ಇಡಬೇಕು.


ಶಾವಿಗೆ ಸಂಡಿಗೆ
ಬೇಕಾಗುವ ಪದಾರ್ಥ:
ಅಕ್ಕಿ1 ಲೋಟ, ನೀರು 2 ಲೋಟ, ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ನೆನಿಸಿ ನುಣ್ಣಗೆ ರುಬ್ಬಿ ನೀರನ್ನು ಮತ್ತು ಉಪ್ಪನ್ನು ಸೇರಿಸಿ ಪಾತ್ರೆಯಲ್ಲಿ ಬೇಯಿಸಬೇಕು. ಗಟ್ಟಿಯಾದ ನಂತರ ಶಾವಿಗೆ ಮಣೆ ಅಥವಾ ಖಾರಷೇವ ಮಣೆಯಲ್ಲಿ ಚಿಕ್ಕ ಚಿಕ್ಕದಾಗಿ ಒತ್ತಿ ಬಳ್ಳಿಯಂತೆ ಇಡಬೇಕು.

Comments