ಬಾಗೇಪಲ್ಲಿ

ಪ್ರಾಕೃತಿಕ ವಿಕೋಪ; ಜನರಿಗೆ ಜಾಗೃತಿ

ಶತ್ರುದಾಳಿ, ಪ್ರಕೃತಿ ವಿಪತ್ತು, ಅಗ್ನಿ ಅವಘಡ, ಕಟ್ಟಡಗಳ ಕುಸಿತ ಮೊದಲಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ರಾಷ್ಟ್ರೀಯ ವಿಪತ್ತು ನಿಗ್ರಹ ದಳದವರು ಈಚೆಗೆ ಪಟ್ಟಣದ ಮಿನಿವಿಧಾನ ಸೌಧ ಎದುರು ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದರು.

ಬಾಗೇಪಲ್ಲಿ: ಶತ್ರುದಾಳಿ, ಪ್ರಕೃತಿ ವಿಪತ್ತು, ಅಗ್ನಿ ಅವಘಡ, ಕಟ್ಟಡಗಳ ಕುಸಿತ ಮೊದಲಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ರಾಷ್ಟ್ರೀಯ ವಿಪತ್ತು ನಿಗ್ರಹ ದಳದವರು ಈಚೆಗೆ ಪಟ್ಟಣದ ಮಿನಿವಿಧಾನ ಸೌಧ ಎದುರು ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದರು.

ರಾಷ್ಟ್ರೀಯ ವಿಪತ್ತು ನಿಗ್ರಹ ದಳ ಮುಖ್ಯಸ್ಥ ಮಾತನಾಡಿ `ವಿದ್ಯುತ್ ಸಂಪರ್ಕ ಇರುವಲ್ಲಿ ಜಾಗೃತಿಯಿಂದ ಇರಬೇಕು. ಐಎಸ್‌ಐ ಚಿಹ್ನೆ ಹೊಂದಿರುವ ವಸ್ತುಗಳನ್ನೇ ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಿದರು.
ನಿಯೋಜಿತ ತಹಶೀಲ್ದಾರ್ ಮಹೇಶ್‌ಬಾಬು ಮಾತನಾಡಿ `ಪ್ರತಿಯೊಂದು ಅವಘಡಗಳು ಆಕಸ್ಮಿಕವಾಗಿರುತ್ತದೆ. ಅದಕ್ಕೆ ಮುನ್ನಚರಿಕೆ ಇರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಕಿ ಅವಘಡಗಳ ಬಗ್ಗೆ ಸಾರ್ವಜನಿಕರಿಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವೆಂಕಟೇಶ್, ಪುರಸಭಾ ಸದಸ್ಯ ಬಿ.ಆರ್.ನರಸಿಂಹನಾಯ್ಡು, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ.ಸುಧಾಕರ್, ಉಪ ತಹಶೀಲ್ದಾರ್ ನಾರಾಯಣಪ್ಪ, ತಾಲ್ಲೂಕು ಕಚೇರಿ ಹಾಗು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Comments