ಯಲಹಂಕ

ಯೋಗ ವಿಜ್ಞಾನ: 50 ಲಕ್ಷ ಡಾಲರ್ ಯೋಜನೆ

ಪಾಶ್ಚಿಮಾತ್ಯ ದೇಶದ ವೈಜ್ಞಾನಿಕ ಅನ್ವೇಷಣೆಯೊಂದಿಗೆ ಭಾರತೀಯ ಯೋಗ ವಿಜ್ಞಾನ ಸಮ್ಮಿಲನವಾದಲ್ಲಿ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೋಗ ವಿಶ್ವವಿದ್ಯಾಲಯದ (ಡೀಮ್ಡ) ಅಂತರರಾಷ್ಟ್ರೀಯ ಸಂಚಾಲಕ ಎನ್.ವಿ.ರಘುರಾಮ್ ಅಭಿಪ್ರಾಯಪಟ್ಟರು

ಯಲಹಂಕ: ಪಾಶ್ಚಿಮಾತ್ಯ ದೇಶದ ವೈಜ್ಞಾನಿಕ ಅನ್ವೇಷಣೆಯೊಂದಿಗೆ ಭಾರತೀಯ ಯೋಗ ವಿಜ್ಞಾನ ಸಮ್ಮಿಲನವಾದಲ್ಲಿ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೋಗ ವಿಶ್ವವಿದ್ಯಾಲಯದ (ಡೀಮ್ಡ) ಅಂತರರಾಷ್ಟ್ರೀಯ ಸಂಚಾಲಕ ಎನ್.ವಿ.ರಘುರಾಮ್ ಅಭಿಪ್ರಾಯಪಟ್ಟರು.

ಉಪನಗರ 2ನೇ ಹಂತದ `ಎ' ಸೆಕ್ಟರ್‌ನಲ್ಲಿ ಯೋಗ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಈ ನಿಟ್ಟಿನಲ್ಲಿ ಮೊದಲ ಹಂತದ ಪ್ರಯೋಗ ಆರಂಭವಾಗಿದ್ದು, 50 ಲಕ್ಷ ಡಾಲರ್ ಯೋಜನೆಯೊಂದು ಸದ್ಯದಲ್ಲೆ ಅಸ್ತಿತ್ವಕ್ಕೆ ಬರಲಿದೆ.

ಇದರಿಂದ ಯೋಗದ ವಿವಿಧ ವಿಭಾಗಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಕನಸನ್ನು ನನಸುಗೊಳಿಸುವ ಸಮಯ ಹತ್ತಿರವಾಗುತ್ತಿದೆ ಎಂದೆನಿಸುತ್ತಿದೆ' ಎಂದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ರಾಮಕೃಷ್ಣ ಮಾತನಾಡಿ, ಇಂದಿನ ಪರಿಸರವನ್ನು ಗಮನಿಸಿದರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಯೋಗ ಅತ್ಯವಶ್ಯಕವೆನಿಸಿದೆ ಎಂದರು.

`ಉಪಾಧ್ಯಾಯರು ಮಕ್ಕಳನ್ನು ನಿಯತ್ರಿಸುವುದೆ ಕಷ್ಟವಾಗುತ್ತಿದ್ದು, ಮತ್ತೊಂದೆಡೆ ಪೋಷಕರು ತಮ್ಮ ಹುದ್ದೆ ಮತ್ತು ಸಮಸ್ಯೆಗಳ ನಡುವೆ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದಾರೆ.

ಈ ದಿಸೆಯಲ್ಲಿ ಎಲ್ಲ ಕಡೆಗಳಲ್ಲಿ ಯೋಗ ತರಗತಿಗಳನ್ನು ವಿಸ್ತರಿಸುವ ಮೂಲಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜವನ್ನು ಕಟ್ಟಬೇಕಾಗಿದೆ' ಎಂದು ಅವರು ಹೇಳಿದರು.

ಯೋಗ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಯೋಗವನ್ನು ವೈಜ್ಞಾನಿಕವಾಗಿ ಕಲಿಸುವುದು ಮತ್ತು ಎಲ್ಲಡೆ ಹರಡುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಜೀವನವನ್ನು ಸಮಗ್ರ ಚಿಕಿತ್ಸೆಯಿಂದ ಆರೋಗ್ಯಮಯ ಮತ್ತು ಆನಂದಮಯವಾಗಿಸುವುದು ಯೋಗ ವಿಜ್ಞಾನ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು  ತಿಳಿಸಿದರು.

ಯೋಗ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಸಿಂಗ್ಲಾಚಾರ್, ಕಾರ್ಯದರ್ಶಿ ಬಿ.ಎ.ಶ್ರೀಕಾಂತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಚಾವಣಿ ಕುಸಿದು ಬಿದ್ದು ಸೆರೆಸಿಕ್ಕ!

ಮಹಿಳೆಯೊಬ್ಬರ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಸೋಮಶೇಖರ್‌ ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

17 Jan, 2018
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

ಆರೋಪಿ ಸೋಮಶೇಖರ್‌ ನಾಪತ್ತೆ
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

17 Jan, 2018

ಬೆಂಗಳೂರು
ದಕ್ಕಲಿಗರಿಗೆ ಇಂದು ವಾಹನ ವಿತರಣೆ

ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ.

17 Jan, 2018

ಬೆಂಗಳೂರು
ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ

ಹೊಸ ವರ್ಷಾಚರಣೆ ದಿನವಾದ ಡಿ. 31ರಂದು ಮಧ್ಯರಾತ್ರಿ ನಡುರಸ್ತೆಯಲ್ಲೇ ಯುವತಿ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ರೌಡಿ ಅಂಬರೀಷ್‌ ಸೇರಿದಂತೆ 9...

17 Jan, 2018
ಒಳ ಉಡುಪು ಮೂಸಿ ಹೋಗ್ತಾನೆ...!

ಮೆಟ್ರೊ ವಸತಿಗೃಹದಲ್ಲಿ ಸೈಕೊ ಕಾಟ
ಒಳ ಉಡುಪು ಮೂಸಿ ಹೋಗ್ತಾನೆ...!

17 Jan, 2018