ಉದ್ಯೋಗಾವಕಾಶ... ಅಲ್ಲಲ್ಲಿ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಪಬ್ಲಿಕ್ ಸೆಕ್ಟರ್ ಇನ್ಶೂರೆನ್ಸ್ ಕಂಪೆನಿಗಳು, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ದೆಹಲಿ ಪೊಲೀಸ್

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಪಬ್ಲಿಕ್ ಸೆಕ್ಟರ್ ಇನ್ಶೂರೆನ್ಸ್ ಕಂಪೆನಿಗಳು, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ದೆಹಲಿ ಪೊಲೀಸ್

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
ಕೆ.ಎಸ್.ಎಲ್.ಯು.ನಲ್ಲಿ 60 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-6-2013.

ಹುದ್ದೆ ವಿವರ: 1) ಕಚೇರಿ ಅಧೀಕ್ಷಕರು-4 ಹುದ್ದೆ. ವೇತನ ಶ್ರೇಣಿ: ರೂ 22,800- 43,200. 2) ಶೀಘ್ರಲಿಪಿಕಾರರು- 7 ಹುದ್ದೆ. ರೂ 17,650- 32,000, 3) ಸಹಾಯಕರು-15 ಹುದ್ದೆ. ವೇತನ ಶ್ರೇಣಿ: ರೂ 16,000- 29,600, 4) ಕಿರಿಯ ಸಹಾಯಕರು- 30 ಹುದ್ದೆ. ವೇತನ ಶ್ರೇಣಿ: ರೂ 11,600- 21,000, 5) ಚಾಲಕರು-4 ಹುದ್ದೆ. ವೇತನ ಶ್ರೇಣಿ: 11,600- 21,000.
ವಯೋಮಿತಿ: ಕನಿಷ್ಠ: 18 ವರ್ಷ. ಗರಿಷ್ಠ: 35 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿಳಾಸ: ದಿ ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ- 580 025
ಹೆಚ್ಚಿನ ಮಾಹಿತಿಗೆ http://www.kslu.ac.in

ಪಬ್ಲಿಕ್ ಸೆಕ್ಟರ್ ಇನ್ಶೂರೆನ್ಸ್ ಕಂಪೆನಿಗಳು
ವಿವಿಧ ಇನ್ಶೂರೆನ್ಸ್ ಕಂಪೆನಿಗಳಲ್ಲಿ 2600 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8-6-2013

ಹುದ್ದೆ ವಿವರ: ಅಸಿಸ್ಟೆಂಟ್ಸ್: 1) ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್: 800 ಹುದ್ದೆ, 2) ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿಮಿಟೆಡ್: 600 ಹುದ್ದೆ, 3) ಓರಿಯಂಂಟಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್: 600 ಹುದ್ದೆ, 4) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್: 600 ಹುದ್ದೆ.
ವೇತನ ಶ್ರೇಣಿ: ರೂ 7,640- 21,050
ವಿದ್ಯಾರ್ಹತೆ: ಪದವಿ ಅಥವಾ ಶೇಕಡಾ 60 ಅಂಕಗಳೊಂದಿಗೆ ಎಚ್‌ಎಸ್‌ಸಿ/ ತತ್ಸಮಾನ (12ನೇ ತರಗತಿ)
ವಯೋಮಿತಿ: ಕನಿಷ್ಠ 18, ಗರಿಷ್ಠ 28 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ 220 (ಪುರುಷರಿಗೆ) ರೂ 120 (ಮಹಿಳೆಯರಿಗೆ)
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷಾ ದಿನಾಂಕ: 14-7-2013 ಹಾಗೂ 21-7-2013
* ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಪರೀಕ್ಷೆ ನಡೆಯಲಿದೆ. ಮಾಹಿತಿಗೆ http://www.nationalinsuranceindia.com

ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ
ಸಿ.ಯು.ಕೆ.ನಲ್ಲಿ 23 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-6-2013.
ಹುದ್ದೆ ವಿವರ: 1) ಅಸಿಸ್ಟೆಂಟ್ ಪ್ರೊಫೆಸರ್
ವೇತನ ಶ್ರೇಣಿ: ರೂ 15,600- 39,100
ವಿಳಾಸ: ದಿ ರಿಜಿಸ್ಟ್ರಾರ್,  ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ, ಎರಡನೇ ಮಹಡಿ, ಕಾರ್ಯ ಸೌಧ, ಗುಲ್ಬರ್ಗ ಯೂನಿವರ್ಸಿಟಿ ಕ್ಯಾಂಪಸ್, ಗುಲ್ಬರ್ಗ- 585 106. ಹೆಚ್ಚಿನ ಮಾಹಿತಿಗೆ http://cuk.ac.in/

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
ಎಸ್.ಎ.ಐ.ಎಲ್.ನಲ್ಲಿ 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-6-2013. ಹುದ್ದೆ ವಿವರ: ಜೂನಿಯರ್ ಅಸಿಸ್ಟೆಂಟ್ (ಟ್ರೈನಿ)
ವೇತನ: ಸ್ಟೈಪೆಂಡ್: ರೂ 10,700 (ಮೊದಲ ವರ್ಷ)
ವಯೋಮಿತಿ: ಕನಿಷ್ಠ 18, ಗರಿಷ್ಠ 28 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಪದವಿ, ಕಂಪ್ಯೂಟರ್ ಅಪ್ಲಿಕೇಷನ್ ಇನ್ ಡಿಪ್ಲೊಮಾ, ಟೈಪಿಂಗ್. ಅರ್ಜಿ ಶುಲ್ಕ: ರೂ 250
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ಇತರ ಮಾಹಿತಿಗೆ http://sail.shine.com

ದೆಹಲಿ ಪೊಲೀಸ್
ದೆಹಲಿ ಪೊಲೀಸ್‌ನಲ್ಲಿ 95 ಹುದ್ದೆಗಳನ್ನು  ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-6-2013.
ಹುದ್ದೆ ವಿವರ: 1) ಇನ್‌ಸ್ಪೆಕ್ಟರ್ (ಕಂಪ್ಯೂಟರ್)- 1 ಹುದ್ದೆ, 2) ಸಬ್- ಇನ್‌ಸ್ಪೆಕ್ಟರ್ (ಕಂಪ್ಯೂಟರ್)- 3 ಹುದ್ದೆ, 3) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ರೇಡಿಯೊ ಟೆಕ್ನೀಷಿಯನ್ಸ್)- 41 ಹುದ್ದೆ, ವೇತನ ಶ್ರೇಣಿ: ರೂ 9,300- 34,800, 4) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಶಾರ್ಟ್ ಹ್ಯಾಂಡ್ ರಿಪೋರ್ಟರ್ (ಹಿಂದಿ)- 2 ಹುದ್ದೆ, 5) ಹೆಡ್ ಕಾನ್‌ಸ್ಟೆಬಲ್ (ಸ್ಟೋರ್ ಕ್ಲರ್ಕ್)- 17 ಹುದ್ದೆ, 6) ಕಾನ್‌ಸ್ಟೆಬಲ್ (ಬಗ್ಲರ್- ಮೇಲ್)- 10 ಹುದ್ದೆ, 7) ಕಾನ್‌ಸ್ಟೆಬಲ್ (ಬ್ಯಾಂಡ್ ಮ್ಯಾನ್- ಮೇಲ್)- 10 ಹುದ್ದೆ, 8) ಕಾನ್‌ಸ್ಟೆಬಲ್ (ಮೌಂಟೆಡ್- ಮೇಲ್)- 11 ಹುದ್ದೆ. ವೇತನ ಶ್ರೇಣಿ: ರೂ 5,200- 20,200.
ಅರ್ಜಿ ಶುಲ್ಕ: ರೂ 100.
ವಿಳಾಸ: ಪೋಸ್ಟ್ ಬಾಕ್ಸ್ ನಂ. 8020, ದೆಹಲಿ-110 033
ಮಾಹಿತಿಗೆ http://delhipolice.nic.in/

Comments