ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಕಾರ–ಸಹಕಾರ’ದಲ್ಲಿ 151 ಸಮಸ್ಯೆ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಅವರ ನೇತೃತ್ವದಲ್ಲಿ ನಗರದ ಐವಾನ್‌ ಎ ಶಾಹಿಯಲ್ಲಿ ಸೋಮವಾರ ಆಯೋಜಿಸಿದ್ದ ‘ಸರಕಾರ–ಸಹಕಾರ’ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಒಟ್ಟು 151 ಸಮಸ್ಯೆಗಳನ್ನೊಳ ಗೊಂಡ ಅರ್ಜಿಗಳು ಸಲ್ಲಿಕೆಯಾದವು.

ಜನತಾ ದರ್ಶನಕ್ಕೆ ಬಂದಿದ್ದ ದೂರುದಾರರ ಅರ್ಜಿಗಳನ್ನು ಬೆಳಿಗ್ಗೆ ಕಂಪ್ಯೂಟರ್‌ನಲ್ಲಿ ನೋಂದಾ ಯಿಸಿಕೊಂಡು, ರಸೀದಿ ನೀಡಲಾಗಿತ್ತು. ಮಧ್ಯಾಹ್ನ 12.30ರ ನಂತರ ಸಚಿವರು ಕ್ರಮವಾಗಿ ಅರ್ಜಿಗಳನ್ನು ಕೈಗೆತ್ತಿಕೊಂಡರು. ದೂರುದಾರರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗ ಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಿದರು.

ಮೊದಲ ಅರ್ಜಿದಾರರಾದ ಗುಲ್ಬರ್ಗದ ವಾರ್ಡ್‌ ಸಂಖ್ಯೆ 13ರ ನಿವಾಸಿ ಮೊಹ್ಮದ್‌ ತಾಹೀರ್ ಅವರು ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸುವಂತೆ ಕೇಳಿಕೊಂಡಿದ್ದರು. ಜನತಾ ದರ್ಶನ ದಲ್ಲಿ ಸಲ್ಲಿಕೆಯಾದ ಬಹುತೇಕ ಅರ್ಜಿಗಳು ಮಹಾ ನಗರ ಪಾಲಿಕೆಗೆ ಸಂಬಂಧಿಸಿದವುಗಳಾಗಿದ್ದವು.

ರುದ್ರಭೂಮಿಯಲ್ಲಿ ಕೊಳವೆಬಾವಿ ನಿರ್ಮಿಸ ಬೇಕು, ಹೈಮಾಸ್ಟ್‌ದೀಪ ಅಳವಡಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು, ಒಳಚರಂಡಿ ನಿರ್ಮಿಸಿ ಕೊಡಬೇಕು, ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.

ಅಂಗವಿಕಲರಿಗೆ ಶೇ3ರಷ್ಟು ಮೀಸಲಾತಿ ನೀಡ ಬೇಕೆನ್ನುವ ನಿಯಮವನ್ನು ಜಿಲ್ಲಾಡಳಿತ ದಲ್ಲಿರುವ ಯಾವುದೇ ಇಲಾಖೆ ಅನುಸರಿಸುತ್ತಿಲ್ಲ ಎನ್ನುವ ದೂರು ಅರ್ಜಿ ಸಲ್ಲಿಕೆಯಾಗಿತ್ತು. ಸಚಿವರು ಮಧ್ಯಾಹ್ನದಿಂದ ಸಂಜೆ 4ರ ವರೆಗೂ ಎಲ್ಲ ಅರ್ಜಿಗಳನ್ನು ಪರಿಶೀಲಿಸಿದರು. ಶೇ 30ರಷ್ಟು ಅರ್ಜಿಗಳಿಗೆ ಮಾತ್ರ ಸ್ಥಳದಲ್ಲೆ ಪರಿಹಾರ ಕಲ್ಪಿಸಿದರು. ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿದ್ದ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿ ಗಳಿಗೆ ಒಂದು ತಿಂಗಳ ಗಡುವು ನೀಡಿದರು.

ಅಧಿಕಾರಿಗಳ ವಿರುದ್ಧ ಕ್ರಮ: ಜನತಾ ದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಚಿವ ಖಮರುಲ್‌ ಇಸ್ಲಾಂ, ‘ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜನತಾ ದರ್ಶನ ಮಾಡಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿ ತಿಂಗಳು ಜನತಾ ದರ್ಶನ ಮುಂದುವರಿಸಲಾಗುವುದು. ಸಮಸ್ಯೆ ಪರಿಹರಿಸದ ಅಧಿಕಾರಿಗಳ ವಿರುದ್ಧ ತಿಂಗಳಿನ ನಂತರ ಕ್ರಮ ಕೈಗೊಳ್ಳಲಾಗುವುದು. ಕೆಲಸ ಮಾಡಿ ಕೊಡದ ಅಧಿಕಾರಿಗಳ ಬಗ್ಗೆ ಮುಂದಿನ ಜನತಾ ದರ್ಶನದಲ್ಲಿ ತಿಳಿಸಬೇಕು’ ಎಂದು ಸಾರ್ವಜನಿಕರಿಗೆ ತಿಳಿಸಿದರು.

ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಇತ್ಯರ್ಥಪಡಿಸದಿದ್ದರೆ, ಆಯಾ ಇಲಾಖೆಗೆ ಸಂಬಂಧಿ ಸಿದ ಮುಖ್ಯ ಕಾರ್ಯದರ್ಶಿಗೆ ಮನವಿ ರವಾನಿಸ ಲಾಗುವುದು ಎಂದು ಎಚ್ಚರಿಸಿದರು.

ಶುದ್ಧ ಕುಡಿಯುವ ನೀರು: ಕುಡಿಯುವ ನೀರು ಶುದ್ಧೀಕರಣಕ್ಕಾಗಿ ಗುಲ್ಬರ್ಗದಲ್ಲಿ ಆರ್ಗ್ಯಾನಿಕ್‌ ಫಾರ್ಮುಲಾ ಪ್ರಯೋಗ ಆರಂಭವಾಗಿದೆ. ಇನ್ನು ನಾಲ್ಕು ದಿನಗಳಲ್ಲಿ ಎಲ್ಲ ಕಡೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಅನಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಹೊಸ ಆರ್ಗ್ಯಾನಿಕ್‌ ಫಾರ್ಮುಲಾ ಅಳವಡಿಸಲಾಗುವುದು ಎಂದು ಸಚಿವ ಖಮರುಲ್‌ ಇಸ್ಲಾಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT