ಗುವಾಹಟಿ

‘ಎಐಡಿಎಂಕೆ ಜತೆ ಮೈತ್ರಿಗೆ ಸಿಪಿಎಂ ಸಿದ್ಧ’

ಎಡ ರಂಗದೊಂದಿಗೆ ಚುನಾವಣೆ  ಮುನ್ನ ಮೈತ್ರಿಯನ್ನು ಎಐಡಿಎಂಕೆ ನಾಯಕಿ ಜಯಲಲಿತ ತಳ್ಳಿಹಾಕಿದ ನಂತರ, ಚುನಾವಣಾ ನಂತರದ ಮೈತ್ರಿಗೆ ಸಿಪಿಎಂ ಸಿದ್ಧವಾಗಿದೆ ಎಂದು ಪಕ್ಷದ ಹಿರಿಯ ನಾಯಕ ತಿಳಿಸಿದ್ದಾರೆ.

ಗುವಾಹಟಿ (ಪಿಟಿಐ): ಎಡ ರಂಗದೊಂದಿಗೆ ಚುನಾವಣೆ  ಮುನ್ನ ಮೈತ್ರಿಯನ್ನು ಎಐಡಿಎಂಕೆ ನಾಯಕಿ ಜಯಲಲಿತ ತಳ್ಳಿಹಾಕಿದ ನಂತರ, ಚುನಾವಣಾ ನಂತರದ ಮೈತ್ರಿಗೆ ಸಿಪಿಎಂ ಸಿದ್ಧವಾಗಿದೆ ಎಂದು ಪಕ್ಷದ ಹಿರಿಯ ನಾಯಕ ತಿಳಿಸಿದ್ದಾರೆ.

‘ಕಾಂಗ್ರೆಸ್‌ ಮತ್ತು ಬಿಜೆಪಿಯೊಂದಿಗೆ ಸೇರದ ಯಾವುದೇ ಪಕ್ಷದೊಂದಿಗಿನ ಮೈತ್ರಿಗೆ ನಾವು ಸಿದ್ಧರಿದ್ದೇವೆ. ಜಯಲಲಿತ, ನಿತಿಶ್‌ ಕುಮಾರು ಮತ್ತು ನವೀನ್‌ ಪಟ್ನಾಯಕ್‌ ಕಾಂಗ್ರೆಸ್ ಮತ್ತು ಬಿಜೆಪಿಯೇತರರಾಗಿ ಉಳಿದರೆ ಅವರೊಂದಿಗೆ ಚುನಾವಣೆ ನಂತರದ ಮೈತ್ರಿಗೆ ನಾವು ಮುಕ್ತರಿದ್ದೇವೆ’ ಎಂದು ಸಿಪಿಎಂ ಪೊಲೀಟ್ ಬ್ಯೂರೊ ಸದಸ್ಯ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.

‘ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಪ್ರಾದೇಶಿಕ ಪಕ್ಷ­ಗಳೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲು ಸಿಪಿಎಂ ಪ್ರಯತ್ನಿ­­ಸುತ್ತಿದೆ. ಜಯಲಲಿತ­ರೊಂದಿಗೂ ಇದೇ ರೀತಿಯ ಒಪ್ಪಂದ ಮಾಡಿಕೊಳ್ಳುವೆವು. ಭಾರತ ಚರಿತ್ರೆಯಿಂದ ತಿಳಿ­ಬಂದ ವಿಚಾರ­ವೆಂದರೆ ಚುನಾವಣೆ ಪೂರ್ವ ಮೈತ್ರಿ ಪಕ್ಷಗಳು ಎಂದೂ ಸರ್ಕಾರ ರಚನೆ ಮಾಡಿಲ್ಲ’ ಎಂದು ಹೇಳಿದ್ದಾರೆ.

Comments