ಮದುವೆಗೆ ನಿರಾಕರಣೆ: ಆಸಿಡ್‌ ದಾಳಿ

ಮದುವೆ­ಯಾ­ಗಲು ನಿರಾಕರಿಸಿದ ಯುವತಿ ಮತ್ತು ಆಕೆಯ ತಾಯಿಯ ಮೇಲೆ ವ್ಯಕ್ತಿಯೊಬ್ಬ ಶನಿವಾರ ಆಸಿಡ್‌ ಎರಚಿದ್ದಾನೆ.

ಮಚಲಿಪಟ್ಟಣ/ಆಂಧ್ರಪ್ರದೇಶ (ಪಿಟಿಐ): ಮದುವೆ­ಯಾ­ಗಲು ನಿರಾಕರಿಸಿದ ಯುವತಿ ಮತ್ತು ಆಕೆಯ ತಾಯಿಯ ಮೇಲೆ ವ್ಯಕ್ತಿಯೊಬ್ಬ ಶನಿವಾರ ಆಸಿಡ್‌ ಎರಚಿದ್ದಾನೆ.

ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ರಾಜು­ಪೇಟೆ ಎಂಬಲ್ಲಿ ಈ ಘಟನೆ ನಡೆ­ದಿದೆ. ಶೇಕ್‌ ಹಜೀದಾ (26) ಹಾಗೂ ಆಕೆಯ ತಾಯಿ ಜರೀನಾ ಆಸಿಡ್‌ ದಾಳಿಗೆ ತುತ್ತಾಗಿರುವ ದುರ್ವೈವಿಗಳು.  ಇಬ್ಬರಿಗೂ ಶೇ 30ರಿಂದ 40ರಷ್ಟು ಸುಟ್ಟ­ಗಾಯ­ಗಳಾಗಿದ್ದು,  ಚಿಕಿತ್ಸೆಗಾಗಿ ವಿಜಯವಾಡದ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಆರೋಪಿ ಶೇಕ್‌ ಸುಭಾನಿ (36) ಆಸಿಡ್‌ ದಾಳಿ ನಡೆಸಿದ ಆರೋಪಿ. ಘಟನೆ ನಡೆದ ಕೆಲವೇ ತಾಸುಗಳಲ್ಲಿ ಪೊಲೀ­ಸರು ಸುಭಾನಿಯನ್ನು  ಬಂಧಿಸಿ­ದ್ದಾರೆ.
‘ದಿನಗೂಲಿ ಕಾರ್ಮಿಕನಾಗಿದ್ದ ಸುಭಾನಿ , 2 ವರ್ಷದ ಹಿಂದೆ ಪತ್ನಿ ಮತ್ತು ಮಕ್ಕಳನ್ನು ತೊರೆದಿದ್ದ. ಜರೀನಾ ಅವರ ಮನೆ­ಯಲ್ಲಿ ವಾಸವಾಗಿದ್ದ ಆತ, ಹಜೀದಾ ಅವರನ್ನು ಮದುವೆ­ಯಾಗುವಂತೆ ಪೀಡಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಭಾನಿಯ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದ ಜರೀನಾ ಮೇಲೆ ಆರೋಪಿ ಆಸಿಡ್‌ ಎರಚಿದಾಗ, ಕೂಡಲೇ ಮಗಳ ರಕ್ಷಣೆಗೆ ಧಾವಿಸಿದ ಆಕೆ ತಾಯಿಗೂ ಆಸಿಡ್‌ ತಗಲಿದೆ. ಘಟನೆಯಲ್ಲಿ ಸುಭಾನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಪೊಲೀಸರು  ಹೇಳಿದ್ದಾರೆ.

Comments