ಮೋದಿಗೆ ಆಂಟನಿ ತಿರುಗೇಟು

ನಿಜವಾದ ದೇಶಭಕ್ತರಾದವರು, ರಕ್ಷಣಾ ಪಡೆಯ ಸ್ಥೈರ್ಯಗೆಡಿಸುವ  ಮತ್ತು ಆ ಮೂಲಕ ಶತ್ರುಗಳಿಗೆ ಸಹಾಯ ಮಾಡುವ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ರಕ್ಷಣ ಸಚಿವ ಎ.ಕೆ. ಆಂಟನಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತಿಗೆ ತಿರುಗೇಟು ನೀಡಿದ್ದಾರೆ

ತಿರುವನಂತಪುರ(ಪಿಟಿಐ): ನಿಜವಾದ ದೇಶಭಕ್ತರಾದವರು, ರಕ್ಷಣಾ ಪಡೆಯ ಸ್ಥೈರ್ಯಗೆಡಿಸುವ  ಮತ್ತು ಆ ಮೂಲಕ ಶತ್ರುಗಳಿಗೆ ಸಹಾಯ ಮಾಡುವ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ರಕ್ಷಣ ಸಚಿವ ಎ.ಕೆ. ಆಂಟನಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತಿಗೆ ತಿರುಗೇಟು ನೀಡಿದ್ದಾರೆ

ಶನಿವಾರ ಪತ್ರಕರ್ತರೊಂದಿ ಮಾತನಾಡಿದ ಆಂಟನಿ, ‘ಮೋದಿ ಅವರ ಈ ರೀತಿಯ ಹೇಳಿಕೆ ಇಡೀ ರಕ್ಷಣಾ ಪಡೆ­ಯನ್ನೇ ಎದೆಗುಂದಿ­ಸುತ್ತದೆ. ಕೇವಲ ಕೀಳುಮಟ್ಟದ ಜನ­ಪ್ರಿಯ­ತೆ­ಗಾಗಿ ನೀಡುವ ಇಂತಹ ಹೇಳಿಕೆಯನ್ನು ಯಾವ ದೇಶ­­ಪ್ರೇಮಿ­ಯೂ ಸಹಿಸುವುದಿಲ್ಲ’ ಎಂದು ಮೋದಿ ಅವರಿಗೆ ಚಾಟಿ ಬೀಸಿ­ದ್ದಾರೆ. 

ಪಾಕ್‌ ಸೇನಾ ಸಮವಸ್ತ್ರದಲ್ಲಿದ್ದ ಮಂದಿ ಬಂದು ನಮ್ಮ ಸೈನಿಕರ ಶಿರಚ್ಛೇದ ಮಾಡಿದರು ಎಂದು ಆಂಟನಿ ಸಂಸತ್‌­­­ನಲ್ಲಿ ನೀಡಿದ ಹೇಳಿಕೆಗೆ ವಿರುದ್ಧ ವಾಗ್ದಾಳಿ ನಡೆ­ಸಿದ ಮೋದಿ, ‘ಕಾಶ್ಮೀರ ಮತ್ತು ಭಾರತದ ಪ್ರದೇಶ­ಗಳ ಶಾಂತಿ ಕದಡಲು 3‘ಎ.ಕೆ’ಗಳು ಸಾಕು ಎಂದು ಆರೋಪಿಸಿದ್ದರು.

Comments