ವಂಚನೆ ಹಗರಣ: ಸುದೀಪ್ತ ಸೇನ್‌ ಪತ್ನಿ, ಪುತ್ರ ಬಂಧನ

ಹಣ ಲೇವಾದೇವಿ ಪ್ರಕರಣವೊಂದರಲ್ಲಿ ಬಹು­ಕೋಟಿ ರೂಪಾಯಿಗಳ ಸಾರಧಾ ಚಿಟ್‌ಫಂಡ್‌ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್‌ ಅವರ ಪತ್ನಿ ಮತ್ತು ಪುತ್ರನನ್ನು ಜಾರಿ ನಿರ್ದೇಶನಾ­ಲಯ ಬುಧವಾರ ತಡರಾತ್ರಿ ಬಂಧಿಸಿದೆ.

ನವದೆಹಲಿ/ಕೋಲ್ಕತ್ತ (ಪಿಟಿಐ): ಹಣ ಲೇವಾದೇವಿ ಪ್ರಕರಣವೊಂದರಲ್ಲಿ ಬಹು­ಕೋಟಿ ರೂಪಾಯಿಗಳ ಸಾರಧಾ ಚಿಟ್‌ಫಂಡ್‌ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್‌ ಅವರ ಪತ್ನಿ ಮತ್ತು ಪುತ್ರನನ್ನು ಜಾರಿ ನಿರ್ದೇಶನಾ­ಲಯ ಬುಧವಾರ ತಡರಾತ್ರಿ ಬಂಧಿಸಿದೆ.

ಪಶ್ಚಿಮಬಂಗಾಳ, ಒಡಿಶಾ ಹಾಗೂ ಅಸ್ಸಾಂ ರಾಜ್ಯಗಳಾದ್ಯಂತ ಸಾವಿರಾರು ಹೂಡಿಕೆ­ದಾರರನ್ನು ವಂಚಿಸಿದ ಈ ಭಾರಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಈವರೆಗೆ ತಲೆ­ಮರೆಸಿಕೊಂಡಿದ್ದ ಸುದೀಪ್ತ ಪತ್ನಿ ಪಿಯಾಲಿ ಸೇನ್‌ ಮತ್ತು ಪುತ್ರ ಶುಭೋ­ಜಿತ್‌ ಅವರನ್ನು ಎರಡು ತಾಸು ಪ್ರಶ್ನಿ­ಸಿದ ನಂತರ ಬಂಧಿಸಿ­ದ್ದಾರೆ.

Comments