ಅಪರಾಧ ಮುಕ್ತ ಭಾರತ: ಮೋದಿ

ನಾನು ಅಧಿಕಾರಕ್ಕೆ ಬಂದರೆ ಅಪರಾಧಿಗಳು ಮತ್ತು ಭ್ರಷ್ಟರನ್ನು ಜೈಲಿಗೆ ಕಳುಹಿಸಿ ಅಪರಾಧ ಮುಕ್ತ ಭಾರತ ರೂಪಿಸುವುದಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.

ಹರ್ದೋಯಿ (ಪಿಟಿಐ);  ನಾನು ಅಧಿಕಾರಕ್ಕೆ ಬಂದರೆ ಅಪರಾಧಿಗಳು ಮತ್ತು ಭ್ರಷ್ಟರನ್ನು ಜೈಲಿಗೆ ಕಳುಹಿಸಿ ಅಪರಾಧ ಮುಕ್ತ ಭಾರತ ರೂಪಿಸುವುದಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದಾರೆ.

ಇಲ್ಲಿನ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೇ 16ರ ಬಳಿಕ ಪಕ್ಷ ಅಧಿಕಾರಕ್ಕೆ ಬಂದರೆ, ಗೆದ್ದ ಸಂಸದರ ದಾಖಲೆಗಳನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ ಅವರು ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ  ಸುಪ್ರೀಂ ಕೋರ್ಟ್‌ಗೆ ಹೇಳಿ ಶಿಕ್ಷೆ ಕೊಡಿಸುವುದಾಗಿ ಮೋದಿ ತಿಳಿಸಿದರು.

ಬಿಜೆಪಿ ಅಥವಾ ಎನ್‌ಡಿಎ ಮೈತ್ರಿ ಕೂಟದ ಸಂಸದರನ್ನು ಮುಲಾಜಿಲ್ಲದೆ ಜೈಲಿಗೆ ಕಳುಹಿಸುವುದಾಗಿ ಮೋದಿ ಗುಡುಗಿದರು.

ಬಡತನ ಗೊತ್ತಿಲ್ಲದ ರಾಹುಲ್‌ ಗಾಂಧಿ, ದಲಿತರು ಮತ್ತು ಬಡವರ ಮನೆಗಳಿಗೆ ಮಾಧ್ಯಮಗಳೊಡನೆ ಭೇಟಿ ನೀಡುತ್ತಿರುವುದು ’ತಾಜ್‌ಮಹಲ್‌’ ಮುಂದೆ ಪೊಟೋ ತೆಗೆಸಿಕೊಂಡಂತಿದೆ ಎಂದು ವ್ಯಂಗ್ಯವಾಡಿದರು.

ಉತ್ತರ ಪ್ರದೇಶದಲ್ಲಿ ಸಾಮಾನ್ಯ ಜನರು ಗೂಂಡಗಳ ಬಂದೂಕಿನ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments