ನವದೆಹಲಿ

ರೋಹಿಣಿ ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ಸಿ.ಜೆ

ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ­ಯಾಗಿ ಆಂಧ್ರ ಪ್ರದೇಶ ಮೂಲದ ಗೋರ್ಲ ರೋಹಿಣಿ ಅವರು ನೇಮಕ­ವಾಗಿದ್ದಾರೆ.

ನವದೆಹಲಿ(ಪಿಟಿಐ): ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ­ಯಾಗಿ ಆಂಧ್ರ ಪ್ರದೇಶ ಮೂಲದ ಗೋರ್ಲ ರೋಹಿಣಿ ಅವರು ನೇಮಕ­ವಾಗಿದ್ದಾರೆ.

58 ವರ್ಷದ ರೋಹಿಣಿ ಅವರಿಗೆ ಸೋಮವಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಪ್ರಮಾಣ ವಚನ ಬೋಧಿಸಿದರು.
ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ. ರಮಣ ಅವರು ಕಳೆದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟಿಗೆ ಬಡ್ತಿ ಪಡೆದ ಕಾರಣ ತೆರವಾದ ಸ್ಥಾನಕ್ಕೆ ರೋಹಿಣಿ ಅವರು ನೇಮಕವಾಗಿದ್ದಾರೆ.

1955ರಲ್ಲಿ ಜನಿಸಿದ ರೋಹಿಣಿ ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯ ಹಾಗೂ ವಿಶಾಖ­ಪಟ್ಟಣಂನ ಆಂಧ್ರ ವಿವಿಯ ಕಾಲೇಜ್ ಆಫ್ ಲಾನಲ್ಲಿ ವ್ಯಾಸಂಗ ಮಾಡಿದ್ದಾರೆ. 1980ರಲ್ಲಿ ವಕೀಲರಾಗಿ  ವೃತ್ತಿ ಆರಂಭಿಸಿದ ಇವರು, ಆಂಧ್ರ­ಪ್ರದೇಶ ರಾಜ್ಯ ವಕೀಲರ ಸಂಘದ ಅಧ್ಯಕ್ಷರೂ ಆಗಿದ್ದರು.

Comments