ನವದೆಹಲಿ

ಗಣಿ ಗಡಿ ಗುರುತಿಗೆ ಕಾಲಾವಕಾಶ ಕೇಳಿದ ಎಸ್‌ಜಿಐ

ಆಂಧ್ರಪ್ರದೇಶ ಹಾಗೂ ಕರ್ನಾಟಕದ  ಬಳ್ಳಾರಿ–ಹೊಸಪೇಟೆ ಪ್ರದೇಶಗಳಲ್ಲಿ  ಅಂತರ­ರಾಜ್ಯ ಗಡಿ ಗುರುತು ಕಾರ್ಯ ಪೂರ್ಣಗೊ­ಳಿಸಲು ಮಹಾ ಸರ್ವೇಕ್ಷಣಾಧಿಕಾರಿ (ಎಸ್‌ಜಿಐ), ಸುಪ್ರೀಂ­ಕೋರ್ಟ್‌­ನಿಂದ ಮತ್ತೊಂದು ತಿಂಗಳು ಕಾಲಾ ವಕಾಶ ಕೇಳಿದ್ದಾರೆ.

ನವದೆಹಲಿ: ಕಬ್ಬಿಣದ ಅದಿರು ಹೇರಳ­ವಾಗಿರುವ ಆಂಧ್ರಪ್ರದೇಶ ಹಾಗೂ ಕರ್ನಾಟಕದ  ಬಳ್ಳಾರಿ–ಹೊಸಪೇಟೆ ಪ್ರದೇಶಗಳಲ್ಲಿ  ಅಂತರ­ರಾಜ್ಯ ಗಡಿ ಗುರುತು ಕಾರ್ಯ ಪೂರ್ಣಗೊ­ಳಿಸಲು ಮಹಾ ಸರ್ವೇಕ್ಷಣಾಧಿಕಾರಿ (ಎಸ್‌ಜಿಐ), ಸುಪ್ರೀಂ­ಕೋರ್ಟ್‌­ನಿಂದ ಮತ್ತೊಂದು ತಿಂಗಳು ಕಾಲಾ ವಕಾಶ ಕೇಳಿದ್ದಾರೆ.

ಏ.13ರಿಂದ 17ರವರೆಗೆ ಕ್ಷೇತ್ರ ಪರಿಶೀಲನೆ ನಡೆಯಬೇಕಿತ್ತು. ಆದರೆ ಕರ್ನಾಟಕದಲ್ಲಿ ಅಧಿಕಾರಿಗಳು ಚುನಾ ವಣಾ ಕಾರ್ಯದಲ್ಲಿ ನಿರತರಾ­ಗಿ­ದ್ದುದ ರಿಂದ ಕ್ಷೇತ್ರ ಪರಿಶೀಲನೆ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಸ್‌ಜಿಐ ಸ್ವರ್ಣ ಸುಬ್ಬರಾವ್‌  ಕೋರ್ಟ್‌ಗೆ ತಿಳಿಸಿದರು.

‘ನಮ್ಮ  ತಾಂತ್ರಿಕ ತಂಡಕ್ಕೆ ಅಗತ್ಯ ರಕ್ಷಣೆ ನೀಡ ಬೇಕೆಂದು ಈಗಾ ಗಲೇ ಬಳ್ಳಾರಿ ಹಾಗೂ ಅನಂತಪುರ ಡಿ.ಸಿಗೆ ಪತ್ರ ಬರೆಯಲಾಗಿದೆ’ ಎಂದು ಎಸ್‌ಜಿಐ ಹೇಳಿದರು.

Comments