ಪ್ರಜಾವಾಣಿ ವಾರ್ತೆ

ಕರ್ನಾಟಕದ ವಕೀಲನಿಗೆ ‘ಸುಪ್ರೀಂ’ನಿರ್ಬಂಧ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕರ್ನಾಟಕದ ವಕೀಲ ಸಿ.ಎಸ್‌.ನಾಗೇಶ್‌ ಎಂಬುವವರಿಗೆ  ಆರು ತಿಂಗಳ ಕಾಲ ಸುಪ್ರೀಂಕೋರ್ಟ್‌ ಆವರಣದೊಳಗೆ ಕಾಲಿಡದಂತೆ ನಿರ್ಬಂಧ ಹೇರಲಾಗಿದೆ.

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕರ್ನಾಟಕದ ವಕೀಲ ಸಿ.ಎಸ್‌.ನಾಗೇಶ್‌ ಎಂಬುವವರಿಗೆ  ಆರು ತಿಂಗಳ ಕಾಲ ಸುಪ್ರೀಂಕೋರ್ಟ್‌ ಆವರಣದೊಳಗೆ ಕಾಲಿಡದಂತೆ ನಿರ್ಬಂಧ ಹೇರಲಾಗಿದೆ.

ನಾಗೇಶ್‌ ವಿರುದ್ಧದ ಈ ಆರೋಪಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಪರಿಶೀಲಿಸಿದ ಬಳಿಕ  ಮಾರ್ಚ್‌ 15ರಂದು ಸುಪ್ರೀಂಕೋರ್ಟ್‌ ಈ ಆದೇಶ ಹೊರಡಿಸಿದೆ.

‘ಸುಪ್ರೀಂಕೋರ್ಟ್‌ನ   ಲಿಂಗ ಸೂಕ್ಷ್ಮತೆ ಹಾಗೂ ಆಂತರಿಕ ದೂರು ಸಮಿತಿ (ಜಿಸಿಐಸಿಸಿ) ಈ ಸಂಬಂಧ ತನಿಖೆ ನಡೆಸಿ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರಿಗೆ  2014ರ ಮಾರ್ಚ್‌್ 4ರಂದು ವರದಿ ಸಲ್ಲಿಸಿತ್ತು’  ಎಂದು ಕೋರ್ಟ್‌ ರಿಜಿಸ್ಟ್ರಾರ್‌ ರಚನಾ ಗುಪ್ತಾ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ನಾಗೇಶ್‌ ಮೂಲ ಚಿಕ್ಕನಾಯಕನಹಳ್ಳಿ
ತುಮಕೂರು: ಸಿ.ಎಸ್‌.ನಾಗೇಶ್‌ ಮೂಲತಃ ಜಿಲ್ಲೆಯ ಚಿಕ್ಕನಾಯಕನಹಳ್ಳಿಯವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಇಲ್ಲಿಯೇ ಪಡೆದಿದ್ದಾರೆ. ಪಟ್ಟಣದ ದೇಶಿಯ ವಿದ್ಯಾಪೀಠದ ವಿದ್ಯಾರ್ಥಿ. ಕಾನೂನು ಪದವೀಧರರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Comments