ಪಟ್ನಾ

ಬಂಧನ ಭೀತಿ: ಗಿರಿರಾಜ್‌ ಸಿಂಗ್‌ ನಾಪತ್ತೆ

ವಿವಾದಾತ್ಮಕ ಹೇಳಿಕೆಯಿಂದಾಗಿ ಬಂಧನ ಭೀತಿಯಲ್ಲಿರುವ ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಮನೆ ಮೇಲೆ ಪೊಲೀಸರು ಗುರುವಾರ ದಾಳಿ ಮಾಡಿದ್ದು ಅವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ನಾ (ಐಎಎನ್‌ಎಸ್‌): ವಿವಾದಾತ್ಮಕ ಹೇಳಿಕೆಯಿಂದಾಗಿ ಬಂಧನ ಭೀತಿಯಲ್ಲಿರುವ ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಮನೆ ಮೇಲೆ ಪೊಲೀಸರು ಗುರುವಾರ ದಾಳಿ ಮಾಡಿದ್ದು ಅವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಸಂಬಂಧ ಬೊಕಾರೋ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ ಪೊಲೀಸರು ಗಿರಿರಾಜ್‌ ಮನೆ ಮೇಲೆ ದಾಳಿ ಮಾಡಿದರಾದರು ಅವರು ಮನೆಯಲ್ಲಿ ಇರಲಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಿರಿರಾಜ್‌ ಅವರ ನಿವಾಸ ಮತ್ತು ಕಛೇರಿಯನ್ನು ತಪಾಸಣೆ ನಡೆಸಲಾಗಿದೆ. ಅವರ ಮೊಬೈಲ್‌ ಫೋನ್‌ ಸಹ ಸ್ವಿಚ್‌ ಆಪ್‌ ಆಗಿದ್ದು ಗಿರಿರಾಜ್‌ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ತೆರಳಲಿ ಎಂಬ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಬಂಧಿಸುವಂತೆ ಸೂಚಿಸಿದೆ.

Comments