ನವದೆಹಲಿ

ದಕ್ಷಿಣ ಭಾರತದಲ್ಲಿ ಮಳೆ ಹೆಚ್ಚಳ

ಕರ್ನಾಟಕ ಸೇರಿ-ದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಶಾನ್ಯ ಮಾರುತ ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ (ಪಿಟಿಐ): ಕರ್ನಾಟಕ ಸೇರಿ-ದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಶಾನ್ಯ ಮಾರುತ ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರಿನ ನಿರ್ಗಮನದ ಬೆನ್ನಲ್ಲೇ ದಕ್ಷಿಣ ಭಾರತದಲ್ಲಿ ಈಶಾನ್ಯ ಮಾರುತದ ಅಬ್ಬರ ತೀವ್ರಗೊಂಡಿದೆ.
ನೈರುತ್ಯ ಮಾರುತಗಳು ಅ.18-ರಂದು ದೇಶದಿಂದ ಸಂಪೂರ್ಣ-ವಾಗಿ ನಿರ್ಗ-ಮಿಸಿದ್ದು, ಈಶಾನ್ಯ ಮಾರುತಗಳು  ಕರ್ನಾ-ಟಕ, ಕೇರಳ, ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಮಳೆ ಸುರಿಸುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕರ್ನಾಟಕ, ಕೇರಳ ಮತ್ತು ತಮಿಳು-ನಾಡಿನ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ 68.6 ಮಿ.ಮೀ, ಆಗುಂಬೆಯಲ್ಲಿ 19.8 ಮಿ.ಮೀ, ಕಾರವಾರದಲ್ಲಿ 16.4 ಮಿ.ಮೀ ಮತ್ತು ಬೆಂಗಳೂರಿನಲ್ಲಿ 8 ಮಿ.ಮೀ ಮಳೆಯಾಗಿದೆ .

ಚೆನ್ನೈನಲ್ಲಿ ಮಳೆಯ ಪ್ರಮಾಣ ತೀವ್ರವಾಗಿದ್ದು ಗುರುವಾರ 78.1 ಮಿ.ಮೀ ಮಳೆ ದಾಖಲಾಗಿದೆ. ಕೇರಳದ ಕೊಟ್ಟಾಯಂನಲ್ಲಿ 29.8 ಮಿ.ಮೀ, ಕೊಯಿಕೋಡ್‌ನಲ್ಲಿ 27.9 ಮಿ.ಮೀ ಮಳೆ ಸುರಿದಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌, ದಕ್ಷಿಣ ಭಾರತದ ಹಲವೆಡೆ ಈಶಾನ್ಯ ಮಾರುತಗಳು ಮಳೆ ಸುರಿಸುತ್ತಿವೆ ಎಂದು ವರದಿ ಮಾಡಿದೆ.

ಹವಾಮಾನ ಇಲಾಖೆ ನಿರೀಕ್ಷಿಸಿದ್ದ-ಕ್ಕಿಂತಲೂ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ.  ಜೂನ್‌–ಸೆಪ್ಟೆಂಬರ್‌ ಅವಧಿಯಲ್ಲಿ ವಾಡಿಕೆಗಿಂತ ಶೇ 12ರಷ್ಟು ಮಳೆ ಕೊರತೆ ಕಂಡಿದೆ.

Comments