ಕೋಲ್ಕತ್ತ

ಬುರ್ದ್ವಾನ್‌ ಸ್ಫೋಟ ಪ್ರಕರಣದ ತನಿಖೆ ಪ್ರಗತಿ ಪರಿಶೀಲಿಸಿದ ಎನ್ಐಎ

ಬುರ್ದ್ವಾನ್‌-ನಲ್ಲಿ ಅ. 3ರಂದು ನಡೆದ  ಸ್ಫೋಟ ಪ್ರಕರಣದ ಪ್ರಗತಿ ಕುರಿತು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಪ್ರಧಾನ ನಿರ್ದೇಶಕ ಶರದ್‌ ಕುಮಾರ್‌ ಅವರು ಮಾಹಿತಿ ಪಡೆದರು.

ಕೋಲ್ಕತ್ತ (ಪಿಟಿಐ): ಬುರ್ದ್ವಾನ್‌-ನಲ್ಲಿ ಅ. 3ರಂದು ನಡೆದ  ಸ್ಫೋಟ ಪ್ರಕರಣದ ಪ್ರಗತಿ ಕುರಿತು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಪ್ರಧಾನ ನಿರ್ದೇಶಕ ಶರದ್‌ ಕುಮಾರ್‌ ಅವರು ಮಾಹಿತಿ ಪಡೆದರು.

ಶುಕ್ರವಾರ ಬೆಳಿಗ್ಗೆ ಬುರ್ದ್ವಾನ್‌ಗೆ ಬಂದ ಶರದ್‌ ಕುಮಾರ್‌ ಅವರು ಎನ್ಐಎ ತನಿಖಾಧಿಕಾರಿಗಳನ್ನು ಭೇಟಿ ಮಾಡಿ ತನಿಖೆಯ ವಿವರ ಪಡೆದರು. ಬಳಿಕ ಬಾಂಬ್‌ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಘಟನೆ ನಡೆದ ಮನೆ ಹಾಗೂ ಸುತ್ತಮುತ್ತಲ ಪ್ರದೇಶ-ಗಳಲ್ಲಿ ಪರಿಶೀಲನೆ ನಡೆಸಿದರು.

ನಂತರ ಸಮೀಪದ ಮತ್ಪಾರಾ-ದಲ್ಲಿ ಗ್ರೆನೇಡ್‌ಗಳು ಪತ್ತೆಯಾಗಿದ್ದ ಮನೆಯಲ್ಲಿಯೂ ಪರಿಶೀಲನೆ  ನಡೆಸಿದರು. ಅ.2ರಂದು ಬುರ್ದ್ವಾನ್‌ ಪಟ್ಟ-ಣದ ಖಗ್್ರಾಗಡದಲ್ಲಿ  ನಡೆದ ಸ್ಫೋಟ-ದಲ್ಲಿ ಜಮ್ಮತ್‌ ಉಲ್‌ ಮುಜಾ-ಹಿದ್ದಿನ್ ಬಾಂಗ್ಲಾದೇಶ್‌ ಗುಂಪಿನ ಇಬ್ಬರು ಶಂಕಿತ ಉಗ್ರರು ಮೃತಪಟ್ಟು ಒಬ್ಬ ಗಾಯಗೊಂಡಿದ್ದ. ಇಬ್ಬರು ಮಹಿಳೆಯರು ಸೇರಿದಂತೆ ಮೂವ-ರನ್ನು ವಿಚಾರಣೆಗೆ ಒಳಪಡಿಸಿತ್ತು.

Comments