ನವದೆಹಲಿ

‘ಸ್ವಚ್ಛ ಭಾರತ’: ಮೋದಿ ಕರೆಗೆ ಓಗೊಟ್ಟ ಒಮರ್‌

‘ಸ್ವಚ್ಛ ಭಾರತ ಅಭಿ-ಯಾನ’ಕ್ಕೆ  ಜಮ್ಮು–ಕಾಶ್ಮೀರ ಮುಖ್ಯ-ಮಂತ್ರಿ ಹಾಗೂ ಕಾಂಗ್ರೆಸ್‌ ಮುಖಂಡ ಒಮರ್‌ ಅಬ್ದುಲ್ಲಾ ಕೂಡ ಕೈಜೋಡಿಸಿ-ದ್ದಾರೆ. ಈ ಮೊದಲು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ನವದೆಹಲಿ:  ‘ಸ್ವಚ್ಛ ಭಾರತ ಅಭಿ-ಯಾನ’ಕ್ಕೆ  ಜಮ್ಮು–ಕಾಶ್ಮೀರ ಮುಖ್ಯ-ಮಂತ್ರಿ ಹಾಗೂ ಕಾಂಗ್ರೆಸ್‌ ಮುಖಂಡ ಒಮರ್‌ ಅಬ್ದುಲ್ಲಾ ಕೂಡ ಕೈಜೋಡಿಸಿ-ದ್ದಾರೆ. ಈ ಮೊದಲು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಶ್ರೀನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗುರುವಾರ ರಾತ್ರಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲಿಕೆ ಕಾರ್ಮಿಕರ ಜತೆ ಒಮರ್‌್ ಅಬ್ದುಲ್ಲಾ ಕೈಜೋಡಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.  ‘ಇದೊಂದು ಪ್ರಶಂಸನೀಯ ಪ್ರಯತ್ನವಾಗಿದ್ದು, ಅಭಿಯಾನ­ವನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಅಭಿಯಾನಕ್ಕೆ ತಮ್ಮ ಹೆಸರನ್ನು ಸೂಚಿಸಿದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಒಮರ್‌ ಅಬ್ದುಲ್ಲಾ ಕೃತಜ್ಞತೆ ಸಲ್ಲಿಸಿದ್ದಾರೆ.  ತಮ್ಮ ಸಹೋದರಿ ಸಾರಾ ಪೈಲಟ್‌ (ಸಚಿನ್‌ ಪೈಲಟ್‌ ಪತ್ನಿ), ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ, ನಟಿ ದೀಪಿಕಾ ಪಡುಕೋಣೆ, ಕಾಂಗ್ರೆಸ್‌ ಮುಖಂಡ ಮಿಲಿಂದ್‌ ದೇವ್ರಾ,  ಬಿಜೆಪಿ ಸಂಸದ ಜಯ್‌ ಪಾಂಡಾ, ಪಿಡಿಪಿ ಪ್ರಮುಖ ನಾಯಕಿ ಮೆಹಮೂಬಾ ಮುಫ್ತಿ, ಟ್ವಿಟರ್‌ ನ್ಯೂಸ್‌ ಮುಖ್ಯಸ್ಥ ರಹೀಲ್‌ ಖುರ್ಷಿದ್‌, ಟಿ.ವಿ ನಿರೂಪಕ ಅರ್ಣವ್‌ ಗೋಸ್ವಾಮಿ ಮತ್ತಿತರರನ್ನು ಈ   ಅಭಿಯಾನಕ್ಕೆ ಒಮರ್‌ ಹೆಸರಿಸಿದ್ದಾರೆ.

Comments