ಚಲಿಸುವ ರೈಲಿನಿಂದ ಮಹಿಳೆಯನ್ನು ನೂಕಿದ ಯುವಕ

26 ವರ್ಷದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಯುವನೊಬ್ಬ ಹೊರಕ್ಕೆ ಎಸೆದಿರುವ ಘಟನೆ ನೆರೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ರೈಲ್ವೆ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮುಜಫ್ಫರ್ ನಗರ (ಪಿಟಿಐ): 26 ವರ್ಷದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಯುವನೊಬ್ಬ ಹೊರಕ್ಕೆ ಎಸೆದಿರುವ ಘಟನೆ ನೆರೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ರೈಲ್ವೆ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸ್ನೇಹಿತರೊಂದಿಗೆ ಉತ್ತರಾಖಂಡ ಪ್ರವಾಸ ಮುಗಿಸಿಕೊಂಡು ಅಜ್ಮೇರ್‌–ಹರಿದ್ವಾರ್ ರೈಲಿನಲ್ಲಿ ರೆವಾರಿಗೆ ತೆರಳುತ್ತಿದ್ದ ವೇಳೆ ಈ ಅಮಾನವೀಯ ಕೃತ್ಯ ನಡೆದಿದೆ ಎಂದು ಡಿವೈಎಸ್‌ಪಿ ರಂಜನಾ ತ್ಯಾಗಿ ತಿಳಿಸಿದ್ದಾರೆ.

ಮಹಿಳೆಗೆ ಕಿರುಕುಳ ನೀಡಿದ ಆ ಯುವಕ ಅವರನ್ನು ದೋಚಲು ಕೂಡ ಪ್ರತ್ನಿಸಿದ್ದಾನೆ. ಮಹಿಳೆ ತಡೆಯಲು ಮುಂದಾದಾಗ ಯುವಕ ಅವರನ್ನು ರೈಲಿನಿಂದ ಹೊರಕ್ಕೆ ನೂಕಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ವಿಚಾರಣೆ ಆರಂಭವಾಗಿದ್ದು, ತಲೆಮರಿಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments