ನಮ್ಮೂರ ಊಟ

ಮೇಕೆ ಮಾಂಸದಡುಗೆ

ಪವಿತ್ರ ರಮ್ಜಾನ್‌ ಮಾಸದಲ್ಲಿ ಉಪವಾಸ ಹಾಗೂ ಆಹಾರ ಎರಡೂ ಒಟ್ಟೊಟ್ಟಿಗೆ ಮಹತ್ವ ಪಡೆಯುತ್ತವೆ. ಬೆಳಗಿನ ಜಾವದ ‘ಸೆಹರಿ’ ಹಾಗೂ ಸಂಜೆಯ ಇಫ್ತಾರ್‌ಗೆ ಹೊಸ ಹೊಸ ಮಾಂಸದಡುಗೆಯನ್ನು ಧರ್ಮೇಂದ್ರ ದೊಡ್ಡಮಗ್ಗೆ ಅವರು ಪರಿಚಯಿಸಿದ್ದಾರೆ.

ಬೋಟಿ ಗ್ರೇವಿ
ಸಾಮಗ್ರಿ:
ಬೋಟಿ 1 ಕೆ.ಜಿ, ಕಡಲೆಕಾಳು 100 ಗ್ರಾಂ, ಆಲೂಗಡ್ಡೆ 100 ಗ್ರಾಂ, ಬಾಳೆಕಾಯಿ 1, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ,  ಕೊತ್ತಂಬರಿ ಕಾಲು ಕಟ್ಟು, ಪುದೀನ ಕಾಲು ಕಟ್ಟು, ಈರುಳ್ಳಿ 3, ಟೊಮೆಟೊ 1, ಗರಂ ಮಸಾಲೆ 1 ಚಮಚ, ಧನಿಯಾ ಪುಡಿ 3 ಚಮಚ, ಖಾರದ ಪುಡಿ 3 ಚಮಚ, ಅರಿಶಿನ ಪುಡಿ ಸ್ವಲ್ಪ, ಕಾಯಿ ಅರ್ಧ ಹೋಳು, ಎಣ್ಣೆ, ತುಪ್ಪ (ಡಾಲ್ಡಾ), ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಬೋಟಿಯನ್ನು ಸುಣ್ಣ ಹಾಕಿ ಚೆನ್ನಾಗಿ ತೊಳೆದು ತೆರೆದ ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ, ನಂತರ ನೊರೆಯ ರೀತಿ ತೇಲುವುದನ್ನು ಚೆಲ್ಲಿ ಮತ್ತೆ ಚೆನ್ನಾಗಿ ತೊಳೆದಿಟ್ಟುಕೊಳ್ಳಿ, ಚೆನ್ನಾಗಿ ತೊಳೆಯುವುದು ಮುಖ್ಯ. ತೊಳೆಯದಿದ್ದರೆ  ಗ್ರೇವಿ ತಯಾರಿಸಿದ ನಂತರ ಕೆಟ್ಟ ವಾಸನೆ ಬರುತ್ತದೆ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಪುದೀನ, ಗರಂ ಮಸಾಲೆ, ಧನಿಯಾ ಪುಡಿ, ಖಾರದ ಪುಡಿ, ಅರಿಶಿನ ಪುಡಿ, ಕಾಯಿಗಳನ್ನು ರುಬ್ಬಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಚೆನ್ನಾಗಿ ತೊಳೆದ ಬೋಟಿಯನ್ನು ಹಾಕಿ ಉಪ್ಪನ್ನು ಬೆರೆಸಿ. ನಂತರ ನೆನೆಸಿದ ಕಡಲೆಕಾಳು, ಕತ್ತರಿಸಿದ ಆಲೂಗಡ್ಡೆ, ಬಾಳೆಕಾಯಿ ಹಾಕಿ ಫ್ರೈ ಮಾಡಿ. ನಂತರ ರುಬ್ಬಿದ ಮಿಶ್ರಣವನ್ನು ಮತ್ತು ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 10 ವಿಷಲ್ ಹಾಕಿಸಿ. ನಂತದ ಕುಕ್ಕರ್ ಮುಚ್ಚಳ ತೆಗೆದು ಬೆಂದಿಲ್ಲದಿದ್ದರೆ ಚೆನ್ನಾಗಿ ಬೇಯಿಸಿ, ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಕೈಮಾ ಹಸಿ ಅವರೆಬೇಳೆ ಗ್ರೇವಿ          

ಸಾಮಗ್ರಿ: ಕೈಮಾ ಅರ್ಧ ಕೆ.ಜಿ (ಮೇಕೆ ಮಾಂಸ), ಹಸಿ ಅವರೆಬೇಳೆ ಅರ್ಧ ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಕಾಲು ಕಟ್ಟು, ಪುದೀನ ಸೊಪ್ಪು ಕಾಲು ಕಟ್ಟು, ಧನಿಯಾ ಪುಡಿ 4 ಚಮಚ, ಖಾರದಪುಡಿ 3 ಚಮಚ, ಅರಿಶಿನ ಪುಡಿ ಸ್ವಲ್ಪ,  ಗರಂ ಮಸಾಲೆ 1 ಚಮಚ, ಮಟನ್ ಮಸಾಲೆ ಅರ್ಧ ಚಮಚ, ಈರುಳ್ಳಿ 4, ಟೊಮೆಟೊ 2, ಕಾಯಿ ಅರ್ಧ ಓಳು, ಎಣ್ಣೆ, ತುಪ್ಪ (ಡಾಲ್ಡಾ), ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ:  ಈರುಳ್ಳಿ ಖಾರಕ್ಕೆ : ಈರುಳ್ಳಿ, ಕೊತ್ತಂಬರಿ, ಪುದೀನ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.  ಕಾಯಿ ಮಸಾಲೆಗೆ : ಕಾಯಿ, ಗರಂ ಮಸಾಲೆ, ಮಟನ್ ಮಸಾಲೆ, ಟೊಮೆಟೊ, ಧನಿಯಾಪುಡಿ, ಖಾರದಪುಡಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ನಂತರ ಕೈಮಾ ಮತ್ತು ಹಸಿ ಅವರೆ ಬೇಳೆಯನ್ನು ಹಾಕಿ ಉಪ್ಪನ್ನು ಬೆರೆಸಿ. ನಂತರ ಈರುಳ್ಳಿ ಖಾರ ಮಿಶ್ರಣವನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಷಲ್ ಹಾಕಿಸಿ, ಮುಚ್ಚಳ ತೆಗೆದು ಕಾಯಿ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ, ಬೆಂದ ನಂತರ ಕೊತ್ತಂಬರಿ ಉದುರಿಸಿ.

ಬ್ರೇನ್ ಫ್ರೈ 
ಸಾಮಗ್ರಿ: ಮೇಕೆ ಬ್ರೇನ್ 2, ಈರುಳ್ಳಿ 1, ಟೊಮೆಟೊ 1, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರದ ಪುಡಿ ಅರ್ಧ ಚಮಚ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ತೆರೆದ ಪಾತ್ರೆಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಸಿಡಿಸಿ ಈರುಳ್ಳಿ ಹಾಕಿ. ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಟೊಮೆಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರದ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಬ್ರೇನ್ ಹಾಕಿ (ಎಗ್ ಬುರ್ಜಿಯ ರೀತಿ ಕುಟ್ಟಿ) ಬೇಯುವ ತನಕ ತಿರುಗಿಸಿ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಕಾಲು ಸೂಪ್        
ಸಾಮಗ್ರಿ: ಮೇಕೆ ಕಾಲು 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1, ಕೊತ್ತಂಬರಿ ಕಾಲು ಕಟ್ಟು, ಪುದೀನ ಕಾಲು ಕಟ್ಟು, ಹಸಿ ಮೆಣಸಿನಕಾಯಿ 2, ಕಾಳು ಮೆಣಸು ಪುಡಿ ಕಾಲು ಚಮಚ, ಜೀರಿಗೆ ಪುಡಿ ಕಾಲು ಚಮಚ, ಈರುಳ್ಳಿ 1, ಟೊಮೆಟೊ 1, ಎಣ್ಣೆ, ತುಪ್ಪ (ಡಾಲ್ಡಾ), ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಎಣ್ಣೆ ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್,  ಟೊಮೆಟೊ, ಮೇಕೆಕಾಲು, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ, ಪುದೀನ, ಉಪ್ಪನ್ನು ಹಾಕಿ ಫ್ರೈ ಮಾಡಿ. ನಂತರ ನೀರು ಸೇರಿಸಿ ಸ್ವಲ್ಪ ಬೇಯಿಸಿದ ತರುವಾಯ ಕುಕ್ಕರ್ ಮುಚ್ಚಳ ಮುಚ್ಚಿ 15ವಿಷಲ್ ಹಾಕಿಸಿ. ಆಗ ಕಾಲು ಸೂಪ್ ಕುಡಿಯಲು ಸಿದ್ಧವಾದಂತೆ.

 

Comments
ಈ ವಿಭಾಗದಿಂದ ಇನ್ನಷ್ಟು
ಮರುವಾಯಿ ಗಸಿ ಏಡಿ ಸುಕ್ಕ...

ಮಾಂಸಾಹಾರ
ಮರುವಾಯಿ ಗಸಿ ಏಡಿ ಸುಕ್ಕ...

17 Feb, 2018
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

23 Jun, 2017
ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

ಪ್ರಜಾವಾಣಿ ರೆಸಿಪಿ
ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

2 Jun, 2017
ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

ಮಾಂಸಾಹಾರ
ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

9 May, 2017
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

ಪ್ರಜಾವಾಣಿ ರೆಸಿಪಿ
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

28 Apr, 2017