ನವದೆಹಲಿ

ವೈಮಾನಿಕ ಸಮೀಕ್ಷೆ ಚಿತ್ರ: ಪಿಐಬಿ ವಿಷಾದ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚೆನ್ನೈಯಲ್ಲಿ ನಡೆಸಿದ ವೈಮಾನಿಕ ಸಮೀಕ್ಷೆಗೆ ಸಂಬಂಧಿಸಿದಂತೆ ‘ಫೋಟೊಶಾಪ್‌’ನಲ್ಲಿ ರೂಪಿಸಿದ ಚಿತ್ರ ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರದ ವಾರ್ತಾ ವಿಭಾಗ (ಪಿಐಬಿ) ವಿಷಾದ ವ್ಯಕ್ತಪಡಿಸಿದೆ.

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚೆನ್ನೈಯಲ್ಲಿ ನಡೆಸಿದ ವೈಮಾನಿಕ ಸಮೀಕ್ಷೆಗೆ ಸಂಬಂಧಿಸಿದಂತೆ ‘ಫೋಟೊಶಾಪ್‌’ನಲ್ಲಿ ರೂಪಿಸಿದ ಚಿತ್ರ ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರದ ವಾರ್ತಾ ವಿಭಾಗ (ಪಿಐಬಿ) ವಿಷಾದ ವ್ಯಕ್ತಪಡಿಸಿದೆ.

ಪಿಐಬಿ ತನ್ನ ಜಾಲತಾಣ ಮತ್ತು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದ ಚಿತ್ರದಲ್ಲಿ ಹೆಲಿಕಾಪ್ಟರ್‌ನ ಕಿಟಕಿಯಲ್ಲಿ ಮನೆ ಮತ್ತು ಪ್ರವಾಹದ ನೀರು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ವಿಮಾನ ಅಥವಾ ಹೆಲಿಕಾಪ್ಟರ್‌ನಿಂದ ತೆಗೆದಾಗ ದೃಶ್ಯ ಅಷ್ಟು ಸ್ಪಷ್ಟವಾಗಿ ಮೂಡಿಬರಲು ಸಾಧ್ಯವಿಲ್ಲ ಎಂದು ಹಲವು ಮಾಧ್ಯಮಗಳು ಚಿತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

‘ಬಿಡುಗಡೆ ಮಾಡಲಾದ ಏಳು ಚಿತ್ರಗಳಲ್ಲಿ ಒಂದನ್ನು ‘ಫೋಟೊಶಾಪ್’ ಮೂಲಕ ರೂಪಿಸಲಾಗಿತ್ತು. ಎರಡು ಬೇರೆ ಬೇರೆ ಚಿತ್ರಗಳನ್ನು ಸಂಯೋಜಿಸಿ ಆ ಚಿತ್ರವನ್ನು ರೂಪಿಸಲಾಗಿತ್ತು.  ಆಯ್ಕೆಯಲ್ಲಿನ ದೋಷದಿಂದ ಈ ಚಿತ್ರ ಪ್ರಕಟವಾಗಿದೆ’ ಎಂದು ಪಿಐಬಿ ವಿವರಣೆ ನೀಡಿದೆ.

Comments