ನವದೆಹಲಿ

ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ

ವಾಯಮಾಲಿನ್ಯ ತಡೆಗೆ  ಮುಂದಾಗಿರುವ ದೆಹಲಿ ಸರ್ಕಾರ,  ಸಮ ಮತ್ತು ಬೆಸ ನೋಂದಣಿ ಸಂಖ್ಯೆ ಹೊಂದಿರುವ ಖಾಸಗಿ ವಾಹನಗಳಿಗೆ ಜನವರಿ 1 ರಿಂದ ದಿನ ಬಿಟ್ಟು ದಿನ ಮಾತ್ರ ನಗರದೊಳಗೆ ಸಂಚಾರಕ್ಕೆ  ಅವಕಾಶ ನೀಡಲಿದೆ.

ನವದೆಹಲಿ (ಪಿಟಿಐ): ವಾಯಮಾಲಿನ್ಯ ತಡೆಗೆ  ಮುಂದಾಗಿರುವ ದೆಹಲಿ ಸರ್ಕಾರ,  ಸಮ ಮತ್ತು ಬೆಸ ನೋಂದಣಿ ಸಂಖ್ಯೆ ಹೊಂದಿರುವ ಖಾಸಗಿ ವಾಹನಗಳಿಗೆ ಜನವರಿ 1 ರಿಂದ ದಿನ ಬಿಟ್ಟು ದಿನ ಮಾತ್ರ ನಗರದೊಳಗೆ ಸಂಚಾರಕ್ಕೆ  ಅವಕಾಶ ನೀಡಲಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಮಿತಿಮೀರಿದ ಪ್ರಮಾಣದಲ್ಲಿ ವಾಯು ಮಾಲಿನ್ಯ ದೆಹಲಿಯಲ್ಲಿ ಉಂಟಾಗಿರುವುದಕ್ಕೆ  ನಗರವನ್ನು ‘ವಿಷಾನಿಲದ ಕೋಣೆ’ಗೆ (ಗ್ಯಾಸ್‌ ಛೇಂಬರ್‌)
ಹೈಕೋರ್ಟ್ ಹೋಲಿಸಿದ ಒಂದು ದಿನದ ನಂತರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೇ ದೂಳು ಹರಡುವುದನ್ನು ತಡೆಯಲು  ನಗರದ ರಸ್ತೆಗಳ ಬದಿಯಲ್ಲಿ ಸಸಿ ನೆಡುವ ಯೋಜನೆಗೆ ಸರ್ಕಾರ ನಿರ್ಧರಿಸಿದೆ.

Comments