ನವದೆಹಲಿ

ದೆಹಲಿಯಲ್ಲಿ ದಾಳಿಗೆ ಲಷ್ಕರ್ ಸಂಚು: ಪೊಲೀಸ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಲಷ್ಕರ್–ಎ–ತೈಯಬಾ ಸಂಘಟನೆ ರೂಪಿಸಿದ್ದ ಸಂಚನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ‘ಗಣ್ಯ ವ್ಯಕ್ತಿಗಳನ್ನು‘ ಗುರಿಯಾಗಿಸಿ ದಾಳಿಯ ಉದ್ದೇಶ ಹೊತ್ತು ದೇಶದಲ್ಲಿ ನುಸುಳಿರುವ ಶಂಕಿತ ಎಲ್‌ಇಟಿ ಉಗ್ರ‌ರಿಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಲಷ್ಕರ್–ಎ–ತೈಯಬಾ ಸಂಘಟನೆ ರೂಪಿಸಿದ್ದ ಸಂಚನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ.

‘ಗಣ್ಯ ವ್ಯಕ್ತಿಗಳನ್ನು‘ ಗುರಿಯಾಗಿಸಿ ದಾಳಿಯ ಉದ್ದೇಶ ಹೊತ್ತು ದೇಶದಲ್ಲಿ ನುಸುಳಿರುವ ಶಂಕಿತ ಎಲ್‌ಇಟಿ ಉಗ್ರ‌ರಿಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

ದುಜಾನಾ ಹಾಗೂ ಉಕಾಶಾ ಎಂಬಿಬ್ಬರು ಪಾಕ್‌ ಆಕ್ರಮಿತ ಕಾಶ್ಮೀರದಿಂದ ಜಮ್ಮು ಮತ್ತು ಕಾಶ್ಮೀರದೊಳಗೆ ನುಗ್ಗಿರುವ ಕುರಿತು ದೊರೆತ ಗುಪ್ತಚರ ಮಾಹಿತಿಯಿಂದ ಸಂಚು ಬಯಲಿಗೆ ಬಂದಿದೆ.

ಅಲ್ಲದೇ, ಈ ಸಂಬಂಧ ಡಿಸೆಂಬರ್‌ 1ರಂದೇ ಲೋಧಿ ಕಾಲೋನಿಯಲ್ಲಿರುವ ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಯಾವುದೇ ಹೆಸರುಗಳನ್ನು ಉಲ್ಲೇಖಿಸಿಲ್ಲ. ಅದನ್ನು ಸಂಬಂಧಿತ ಭಯೋತ್ಪಾದನಾ ವಿರೋಧಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

‘ಶಂಕಿತರಾದ ದುಜಾನಾ ಹಾಗೂ ಉಕಾಶಾ ಎಂಬಿಬ್ಬರು ಬಹಳ ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿದ್ದರು. ದೆಹಲಿಯಲ್ಲಿ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ಸ್ವಯಂ ಅಥವಾ ತಮ್ಮ ಕಾರ್ಯಕರ್ತರ ಮೂಲಕ ಆತ್ಮಹತ್ಯಾ ಇಲ್ಲವೇ ಗ್ರೆನೆಡ್‌ ದಾಳಿಗೆ ಸಂಚು ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ’ ಎಂದು ಆ ಮೂಲ ಹೇಳಿದೆ.

ಶಂಕಿತರು ನೊಮನ್‌, ಜೈದ್‌ ಹಾಗೂ ಖುರ್ಷೀದ್‌ ಎಂಬ ಕೋಡ್‌ ಹೆಸರುಗಳನ್ನು ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಜನನಿಬಿಡ ಪ್ರದೇಶಗಳನ್ನು ಗುರಿಯಾಸಿ ದಾಳಿ ನಡೆಸುವ ಶಂಕೆ ಇದೆ ಎಂದೂ ಅವರು ತಿಳಿಸಿದ್ದಾರೆ.

Comments