ಗೌಹಾಟಿ: ಸರಣಿ ಬಾಂಬ್ ಸ್ಫೋಟ, ನಾಲ್ವರಿಗೆ ಗಾಯ

ಅಸ್ಸಾಂನ ಗೌಹಾಟಿಯ ಜನನಿಬಿಡ ಫ್ಯಾನ್ಸಿ ಬಜಾರ್‌ನಲ್ಲಿ ಶನಿವಾರ ಮಧ್ಯಾಹ್ನ ಎರಡು ಸರಣಿ ಬಾಂಬ್‌ ಸ್ಫೋಟವಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಗೌಹಾಟಿ(ಪಿಟಿಐ, ಐಎಎನ್‌ಎಸ್): ಅಸ್ಸಾಂನ ಗೌಹಾಟಿಯ ಜನನಿಬಿಡ ಫ್ಯಾನ್ಸಿ ಬಜಾರ್‌ನಲ್ಲಿ ಶನಿವಾರ ಮಧ್ಯಾಹ್ನ ಎರಡು ಸರಣಿ ಬಾಂಬ್‌ ಸ್ಫೋಟವಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

‘ಉಲ್ಫಾ ಸಂಘಟನೆ ಬಾಂಬ್ ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ಗೌಹಾಟಿ ಪೊಲೀಸ್ ಕಮಿಷನರ್ ಮುಖೇಶ್ ಅಗರ್‌ವಾಲ್ ಅವರು ತಿಳಿಸಿದ್ದಾರೆ.

Comments