ಲಂಡನ್‌

ಬ್ರಿಟನ್‌ಗೆ ಭೇಟಿ ನೀಡಿದ್ದ ಪ್ಯಾರಿಸ್‌ ದಾಳಿ‌ಯ ಉಗ್ರ

ವಿಶ್ವವನ್ನೇ ನಡುಗಿಸಿದ್ದ ಪ್ಯಾರಿಸ್‌ ದಾಳಿಯ ಸಂಚುಕೋರರಲ್ಲೊಬ್ಬ ವರ್ಷಾರಂಭದಲ್ಲಿ ಲಂಡನ್‌ ಹಾಗೂ ಬರ್ಮಿಂಗ್‌ಹ್ಯಾಮ್‌ಗೆ ಭೇಟಿ ನೀಡಿದ್ದ ಎಂಬುದನ್ನು ಭಯೋತ್ಪಾದನೆ ತಡೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಲಂಡನ್‌ (ಪಿಟಿಐ): ವಿಶ್ವವನ್ನೇ ನಡುಗಿಸಿದ್ದ ಪ್ಯಾರಿಸ್‌ ದಾಳಿಯ ಸಂಚುಕೋರರಲ್ಲೊಬ್ಬ ವರ್ಷಾರಂಭದಲ್ಲಿ ಲಂಡನ್‌ ಹಾಗೂ ಬರ್ಮಿಂಗ್‌ಹ್ಯಾಮ್‌ಗೆ ಭೇಟಿ ನೀಡಿದ್ದ ಎಂಬುದನ್ನು ಭಯೋತ್ಪಾದನೆ ತಡೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಸಂಭಾವ್ಯ ಉಗ್ರರ ದಾಳಿಯ ಎಚ್ಚರಿಕೆಯ ಹೊರತಾಗಿಯೂ ಬ್ರಿಟನ್‌ ಪ್ರವೇಶಿಸುವಲ್ಲಿ ಆತ ಸಫಲನಾಗಿದ್ದ‌ ಎಂದು ‘ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

ಉಭಯ ನಗರಗಳಲ್ಲಿ ಆತ ಬ್ರಿಟನ್‌ ವಿರುದ್ಧ ಭಯೋತ್ಪಾದನಾ ಚಟುವಟಿಕೆ ನಡೆಸುವ ಇಲ್ಲವೇ ಅದಕ್ಕೆ ನೆರವಾಗುವ ಉದ್ದೇಶ ಹಾಗೂ ಸಾಮರ್ಥ್ಯವಿರುವ ಶಂಕಿತರನ್ನು ಭೇಟಿ ಮಾಡಿದ್ದ.

ಇದಾದ ಹಲವು ತಿಂಗಳ ಬಳಿಕ ಆತ ಪ್ಯಾರಿಸ್‌ನಲ್ಲಿ ನವೆಂಬರ್ 13ರಂದು ನಡೆದ ಸರಣಿ ದಾಳಿಯ ಸಂಚುಕೋರ ತಂಡದ ಭಾಗವಾಗಿದ್ದ.

ನಸುಳಿದ್ದು ಹೇಗೆ?: ಆತ ಬ್ರಿಟನ್‌ ಹೇಗೆ ಪ್ರವೇಶಿಸಿದ್ದ ಎಂಬುದು ಸ್ಪಷ್ಟಗೊಂಡಿಲ್ಲ. ಆದರೆ, ಆತ ಎರಡು ನಗರಗಳಿಗೆ ಭೇಟಿ ನೀಡಿದ್ದ ಎಂಬುದು ಎಂಐ5 ಹಾಗೂ ಭಯೋತ್ಪಾದನಾ ತಡೆ ಪೊಲೀಸ್‌ ಪಡೆಗಳ ತನಿಖೆಯಿಂದ ಗೊತ್ತಾಗಿದೆ ಎಂದೂ ಅದು ವರದಿ ಮಾಡಿದೆ.

ಪ್ರತಿಕ್ರಿಯಿಸಲು ನಕಾರ: ಮತ್ತೊಂದಡೆ, ಈ ವಿಷಯದ ಕುರಿತು ಪ್ರತಿಕ್ರಿಯಿಸಿಲು ಇಂಗ್ಲೆಂಡ್‌ನ ಗೃಹ ಸಚಿವಾಲಯ ನಿರಾಕರಿಸಿದೆ.

ಪ್ಯಾರಿಸ್‌ ದಾಳಿಯ ಘಟನೆಯ 11 ಸಂಚುಕೋರರಲ್ಲಿ ಒಂಬತ್ತು ಮಂದಿ ಸತ್ತಿದ್ದಾರೆ. ಇನ್ನಿಬ್ಬರು ತಲೆ ಮರಿಸಿಕೊಂಡಿದ್ದಾರೆ.

Comments