ಚೆನ್ನೈ

ನೆರವು: ಬಿಹಾರ, ಒಡಿಶಾ ಸಿಎಂಗೆ ಜಯಾ ಕೃತಜ್ಞತೆ

ಪ್ರವಾಹ ಸಂಕಷ್ಟದಲ್ಲಿರುವ ರಾಜ್ಯಕ್ಕೆ ತಲಾ ₹ 5 ಕೋಟಿ ನೆರವು ನೀಡಿರುವ ಬಿಹಾರ ಮತ್ತು ಒಡಿಶಾ ಸರ್ಕಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮತ್ತು ನವೀನ್‌ಪಟ್ನಾಯಕ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯ ಲಲಿತಾ ಅವರು ಕೃತಜ್ಞತೆ ಹೇಳಿದ್ದಾರೆ.

ಚೆನ್ನೈ(ಪಿಟಿಐ): ಪ್ರವಾಹ ಸಂಕಷ್ಟದಲ್ಲಿರುವ ರಾಜ್ಯಕ್ಕೆ ತಲಾ ₹ 5 ಕೋಟಿ ನೆರವು ನೀಡಿರುವ ಬಿಹಾರ ಮತ್ತು ಒಡಿಶಾ ಸರ್ಕಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮತ್ತು ನವೀನ್‌ಪಟ್ನಾಯಕ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯ ಲಲಿತಾ ಅವರು ಕೃತಜ್ಞತೆ ಹೇಳಿದ್ದಾರೆ.

‘ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ 5 ಕೋಟಿ ನೀಡಿ ತಾವು ಬರೆದಿರುವ ಪತ್ರ ಡಿ.4ರಂದು ತಲುಪಿದೆ. ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ ಹಾಗೂ ತಮಗೆ ಶುಭಾಶಯಗಳು’ ಎಂದು ಜಯ ಲಲಿತಾ ಅವರು ನವೀನ್‌ಪಟ್ನಾಯಕ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.


ನಮ್ಮ ರಾಜ್ಯದ ಬಗೆಗಿನ ನಿಮ್ಮ ಕಾಳಜಿ ಮತ್ತು ಸಹಾಯ ‘ಹೃದಯ ಸ್ಪರ್ಶಿ’ಯಾದುದು ಎಂದು ನಿತೀಶ್ ಕುಮಾರ್ ಅವರಿಗೆ ಬರೆದಿರುವ ಪ್ರತ್ಯೇಕ ಪತ್ರದಲ್ಲಿ ಜಯಾ ಲಲಿತಾ ಉಲ್ಲೇಖಿಸಿದ್ದಾರೆ.

Comments