ನವದೆಹಲಿ

‘ಕಾರ್ಮಿಕ ಕಾನೂನು ದುರ್ಬಲ ಮಾಡಲು ಮೋದಿ ಯತ್ನ’

ದೇಶದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಉದ್ದೇಶ ಪೂರ್ವಕವಾಗಿ ದುರ್ಬಲಗೊಳಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ(ಪಿಟಿಐ): ದೇಶದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಉದ್ದೇಶ ಪೂರ್ವಕವಾಗಿ ದುರ್ಬಲಗೊಳಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಐಎನ್‌ಟಿಯುಸಿ ಕಾರ್ಮಿಕ ಒಕ್ಕೂಟದ 31ನೇ ಅಧಿವೇಶನದಲ್ಲಿ ಅವರು ಮಾತನಾಡಿದರು.  ಮೋದಿ ಅವರು ಕಾರ್ಮಿಕರ ಮೇಲೆ ದಾಳಿ ಆರಂಭಿಸಿದ್ದಾರೆ. ಈ ಮೂಲಕ  ಕಾರ್ಮಿಕ ವಲಯದಲ್ಲಿ ಅಸಮಾಧಾನ ಸೃಷ್ಟಿಸಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ರೈತರ ಹಕ್ಕುಗಳನ್ನು ಕೊಡಿಸಲು ಪಕ್ಷ ಹೋರಾಡಿ ಗೆದ್ದಿದೆ. ಹಾಗೆಯೇ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ದನಿಯಾಗುತ್ತದೆ. ಅವರ ಜತೆ ನಿಲ್ಲುತ್ತದೆ. ಈ ಹೋರಾಟದಲ್ಲಿ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಜಾಗತಿಕ ಮಟ್ಟದಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತವನ್ನು ಉತ್ಪಾದನಾ ಮಾರುಕಟ್ಟೆ ಮುಖ್ಯ ಕೇಂದ್ರವಾಗಿ ಮಾರ್ಪಡಿಸುವ ಮೋದಿ ಚಿಂತನೆ ಒಪ್ಪಬಹುದಾದರೂ ಇದು ಸರ್ವಾನುಮತ  ಪಡೆದಿಲ್ಲ  ಎಂದು ರಾಹುಲ್ ಹೇಳಿದರು.

Comments