ಸಮ–ಬೆಸ ಸಂಖ್ಯೆ ವಾಹನ ಸಂಚಾರಕ್ಕೆ ಅನುಮತಿ

ಪ್ರಾಯೋಗಿಕ ಜಾರಿ: ಕೇಜ್ರಿವಾಲ್‌

ಸಮ ಮತ್ತು ಬೆಸ ಸಂಖ್ಯೆಯ ನೋಂದಣಿ ಹೊಂದಿರುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಮಾತ್ರ ಸಂಚಾರಕ್ಕೆ ಅನುಮತಿ ನೀಡುವ ಯೋಜ ನೆಯನ್ನು ಪ್ರಾಯೋಗಿಕವಾಗಿ ಮಾತ್ರ ಜಾರಿ ಮಾಡಲಾಗುತ್ತದೆ.

ನವದೆಹಲಿ (ಪಿಟಿಐ): ಸಮ ಮತ್ತು ಬೆಸ ಸಂಖ್ಯೆಯ ನೋಂದಣಿ ಹೊಂದಿರುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಮಾತ್ರ ಸಂಚಾರಕ್ಕೆ ಅನುಮತಿ ನೀಡುವ ಯೋಜ ನೆಯನ್ನು ಪ್ರಾಯೋಗಿಕವಾಗಿ ಮಾತ್ರ ಜಾರಿ ಮಾಡಲಾಗುತ್ತದೆ.

ಇದರಿಂದ ಜನರಿಗೆ ತೊಂದರೆಯಾದಲ್ಲಿ ಯೋಜನೆಯನ್ನು ರದ್ದುಪಡಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ವಾಯುಮಾಲಿನ್ಯ ನಿಯಂತ್ರಣ ಸಾಧಿಸಲು ದೆಹಲಿ ಸರ್ಕಾರ ನೂತನ ಸಾರಿಗೆ ನೀತಿ ರೂಪಿಸುತ್ತಿದ್ದು, ಅದರ ಅಂಗವಾಗಿ ಈ ಯೋಜನೆಯನ್ನು ಪ್ರಕಟಿಸಿತ್ತು.

ದೆಹಲಿ ಸರ್ಕಾರ ಶುಕ್ರವಾರವಷ್ಟೇ ಪ್ರಕಟಿಸಿದ್ದ ಯೋಜನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಿದ ನಂತರ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವ ಬಗ್ಗೆ ಯೋಚಿಸ ಲಾಗುತ್ತದೆ. ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಲೇವಡಿ
‘ಸಮ ಸಂಖ್ಯೆಯ ಕಾರು ಹೊಂದಿರುವ 23 ವರ್ಷದ ಪಟೇಲ್ ಯುವತಿಗೆ ಈಗ ಬೆಸ ಸಂಖ್ಯೆಯ ಕಾರು ಹೊಂದಿರುವ ಜತೆಗೆ ಉತ್ತಮ ವೇತನ ಪಡೆಯುವ ಯುವಕ ಬೇಕಾಗಿದ್ದಾನೆ’

‘ದೆಹಲಿಯ ಸಮ ಮತ್ತು ಬೆಸ ಸಂಖ್ಯೆ ಯೋಜನೆ ರಾಮ ಮಂದಿರ ಸಮಸ್ಯೆ ಯನ್ನೂ ನೀಗಿಸುತ್ತದೆ. ಸಮ ಸಂಖ್ಯೆಯ ದಿನ ರಾಮ ಮಂದಿರವನ್ನು ನಿರ್ಮಿಸ ಬಹುದು. ಬೆಸ ಸಂಖ್ಯೆಯ ದಿನ ಮಸೀದಿಯನ್ನು ನಿರ್ಮಿಸಬಹುದು’‘ಈಗ ಗೊತ್ತಾಯಿತು. ಸಮ ಮತ್ತು ಬೆಸ ಸಂಖ್ಯೆ ಇರುವ ಎರಡು ಕಾರುಗಳನ್ನು ಖರೀದಿಸುವ ಸಲು ವಾಗಿಯೇ ದೆಹಲಿ ಶಾಸಕರ ವೇತನವನ್ನು ಶೇ 400ರಷ್ಟು ಏರಿಸಲಾಗಿದೆ’ ದೆಹಲಿ ಸರ್ಕಾರದ ಸಮ ಬೆಸ ಸಂಖ್ಯೆಯ ಕಾರು ಯೋಜನೆಯನ್ನು ಲೇವಡಿ ಮಾಡಿ ಸಾರ್ವಜನಿಕರು ಟ್ವಿಟರ್‌ನಲ್ಲಿ ಲೇವಡಿ ಮಾಡಿರುವ ಬಗೆ ಇದು.

ಸರ್ಕಾರದ ಈ ನಡೆಗೆ ಸಾಮಾಜಿಕ ಮಧ್ಯಮಗಳಲ್ಲಿ ಮೆಚ್ಚುಗೆಯೂ ವ್ಯಕ್ತ ವಾಗಿದೆ. ಈ ಯೋಜನೆಯಿಂದ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ ಎಂದು ಹಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.

Comments