ಫೈಜಾಬಾದ್

ಬಾಬ್ರಿ ಮಸೀದಿ ಧ್ವಂಸ ದಿನಾಚರಣೆ ಅಯೋಧ್ಯೆಯಲ್ಲಿ ಭಾರಿ ಭದ್ರತೆ

‘ಬಾಬ್ರಿ ಮಸೀದಿ ಧ್ವಂಸ’ದ 23ನೇ ವರ್ಷಾಚರಣೆ ಅಂಗವಾಗಿ ಭಾನುವಾರ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್  (ವಿಎಚ್‌ಪಿ) ಭಾರಿ ಸಂಭ್ರಮಾಚರಣೆ ಆಯೋಜಿಸಿದೆ. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಡಳಿತ ಭಾರಿ ಕಟ್ಟೆಚ್ಚರ ವಹಿಸಿದೆ.

ಫೈಜಾಬಾದ್ (ಪಿಟಿಐ): ‘ಬಾಬ್ರಿ ಮಸೀದಿ ಧ್ವಂಸ’ದ 23ನೇ ವರ್ಷಾಚರಣೆ ಅಂಗವಾಗಿ ಭಾನುವಾರ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್  (ವಿಎಚ್‌ಪಿ) ಭಾರಿ ಸಂಭ್ರಮಾಚರಣೆ ಆಯೋಜಿಸಿದೆ. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಡಳಿತ ಭಾರಿ ಕಟ್ಟೆಚ್ಚರ ವಹಿಸಿದೆ.

ಸಂಭ್ರಮಾಚರಣೆ ವೇಳೆ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಕಟ್ಟೆಚ್ಚರ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

‘ಭಾನುವಾರ ಅಯೋಧ್ಯೆಯಲ್ಲಿ ಹಿಂದೂ ಸ್ವಾಭಿಮಾನ ದಿನ ಆಯೋಜಿಸಿದ್ದೇವೆ. ಸಂಭ್ರಮಾಚರಣೆಯಲ್ಲಿ ಭಾಗವಹಿಸುವಂತೆ ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳಲ್ಲಿ ಜನರಿಗೆ ಆಹ್ವಾನ ನೀಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಬರುತ್ತಾರೆ’ ಎಂದು ವಿಎಚ್‌ಪಿ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

‘ಕಾರ್ಯಕ್ರಮದ ವೇಳೆ ಕೋಮುಸೌಹಾರ್ದಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗಿದೆ’ ಎಂದು ಫೈಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಅಯೋಧ್ಯೆ ನಗರದಾದ್ಯಂತ ಶನಿವಾರವೇ ಭಾರಿ ಸಂಖ್ಯೆಯಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. 

ದೇಶದ ವಿವಿಧೆಡೆ ಕಟ್ಟೆಚ್ಚರ: ಬಾಬ್ರಿ ಮಸೀದಿ ಧ್ವಂಸ ದಿನಾಚರಣೆ  ಸಂಬಂಧ ಹಲವೆಡೆ ಭಾನುವಾರ ಕಟ್ಟೆಚ್ಚರ ವಹಿಸಲಾಗಿದೆ.

ಶಬರಿಮಲೆಯಲ್ಲಿ ಬಿಗಿ ಭದ್ರತೆ
ಶಬರಿಮಲೆ (ಕೇರಳ):
ಬಾಬ್ರಿ ಮಸೀದಿ ಧ್ವಂಸ ದಿನದ ಅಂಗವಾಗಿ  ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ  ಭಾನುವಾರ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.1992 ಡಿಸೆಂಬರ್‌ 6ರಂದು ಬಾಬ್ರಿ ಮಸೀದಿ ಕೆಡವಲಾಗಿತ್ತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 5ರಿಂದ 7 ನೇ  ವರೆಗೆ ಶಬರಿಮಲೆಗೆ ಬಿಗಿಬಂದೋಬಸ್ತ್‌ ಕಲ್ಪಿಸಲಾಗುತ್ತದೆ.

ಪ್ರತಿವರ್ಷ ಡಿಸೆಂಬರ್‌ ತಿಂಗಳಲ್ಲಿ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ದೇವಸ್ಥಾನಕ್ಕೆ ಬರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಲೋಹ ಪತ್ತೆ ಸಾಧನಗಳನ್ನು ದೇವಸ್ಥಾನದಲ್ಲಿ ಬಾಗಿಲಲ್ಲಿ ಅಳವಡಿಸಲಾಗಿದೆ ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯಮಿಸಲಾಗಿದೆ. ಇಲ್ಲಿಗೆ ಬರುವ ಭಕ್ತರ  ಇರುಮುಡಿಯನ್ನು ಸಹ ಲೋಹ ಪತ್ತೆ ಸಾಧನಗಳಲ್ಲಿ  ತಪಾಸಣೆ  ನಂತರವೇ ಗರ್ಭಗುಡಿ ಪ್ರವೇಶ ದ್ವಾರದ 18 ಮೆಟ್ಟಿಲು ಹತ್ತುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.

Comments