ಪುದುಚೆರಿಯಲ್ಲೂ ಭಾರಿ ಮಳೆ

ಚೆನ್ನೈ ಬಿಡದ ಮಳೆ: ವಿಮಾನ ಸೇವೆ ಆರಂಭ

ಪ್ರವಾಹ ಪರಿಸ್ಥಿತಿ ತಗ್ಗಿದ್ದ ಚೆನ್ನೈನಲ್ಲಿ ಭಾನುವಾರ ಮತ್ತೆ ಮಳೆಯಾಗುತ್ತಿದೆ. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಗಳ ಸೇವೆ ಆರಂಭಗೊಂಡಿದೆ.

ಚೆನ್ನೈ (ಏಜೆನ್ಸೀಸ್‌): ಪ್ರವಾಹ ಪರಿಸ್ಥಿತಿ ತಗ್ಗಿದ್ದ ಚೆನ್ನೈನಲ್ಲಿ ಭಾನುವಾರ ಮತ್ತೆ ಮಳೆಯಾಗುತ್ತಿದೆ. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಗಳ ಸೇವೆ ಆರಂಭಗೊಂಡಿದೆ.

ಚೆನ್ನೈ ವಿಮಾನ ನಿಲ್ದಾಣದಿಂದ ಪೋರ್ಟ್‌ಬ್ಲೇರ್‌ಗೆ ಏರ್‌ ಇಂಡಿಯಾ ವಿಮಾನವೊಂದು ಪ್ರಯಾಣ ಬೆಳೆಸಿದೆ. ದೆಹಲಿಯಿಂದ ಚೆನ್ನೈಗೆ ಏರ್‌ ಇಂಡಿಯಾ ವಿಮಾನವೊಂದು ಮಧ್ಯಾಹ್ನ 1.40ಕ್ಕೆ ಬರಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೇ ನಾಗರಿಕ ವಿಮಾನಗಳ ಕಾರ್ಯಾಚರಣೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ಧರಿಸಿದೆ. ಮಳೆ ಹೆಚ್ಚಾದರೆ ವಿಮಾನ ಸೇವೆ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪುದುಚೆರಿಯಲ್ಲೂ ಮಳೆ: ಪುದುಚೆರಿಯಲ್ಲೂ ಭಾನುವಾರ ಬೆಳಿಗ್ಗೆಯಿಂದಲೇ ಭಾರಿ ಮಳೆಯಾಗುತ್ತಿದೆ. ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.

Comments