‘ಅಮ್ಮ’ನ ಚಿತ್ರಕ್ಕೆ ಆಕ್ಷೇಪ

ಪ್ರವಾಹದಿಂದ ತತ್ತರಿಸಿರುವ ಚೆನ್ನೈನ ಸಂತ್ರಸ್ತರಿಗಾಗಿ ವಿವಿಧೆಡೆಯಿಂದ ಬರುತ್ತಿರುವ ಪರಿಹಾರ ಸಾಮಗ್ರಿಗಳ ಮೇಲೆ ತಮಿಳುನಾಡು ಸಿ.ಎಂ. ಜಯಲಲಿತಾ ಅವರ ಭಾವಚಿತ್ರ ಅಂಟಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಚೆನ್ನೈ (ಏಜೆನ್ಸೀಸ್‌): ಪ್ರವಾಹದಿಂದ ತತ್ತರಿಸಿರುವ ಚೆನ್ನೈ ನಗರದ ಸಂತ್ರಸ್ತರಿಗಾಗಿ ವಿವಿಧೆಡೆಯಿಂದ ಬರುತ್ತಿರುವ ಪರಿಹಾರ ಸಾಮಗ್ರಿಗಳ ಮೇಲೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರ ಅಂಟಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಎಐಎಡಿಎಂಕೆ ಸರ್ಕಾರ ಪ್ರವಾಹ ಸಂದರ್ಭದಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂಬ ಆರೋಪಗಳು ಹೆಚ್ಚಾಗಿವೆ.

ಚೆನ್ನೈನ ವಿವಿಧ ಭಾಗಗಳಿಗೆ ಪೂರೈಕೆಯಾಗಿರುವ ಪರಿಹಾರ ಸಾಮಗ್ರಿಗಳ ಚೀಲಗಳ ಮೇಲೆ ಜಯಲಲಿತಾ ಅವರ ಭಾವಚಿತ್ರಗಳಿವೆ.

ಎಐಎಡಿಎಂಕೆ ಕಾರ್ಯಕರ್ತರು ಪರಿಹಾರ ಸಾಮಗ್ರಿಗಳ ಚೀಲಗಳ ಮೇಲೆ ಜಯಲಲಿತಾ ಅವರ ಭಾವಚಿತ್ರಗಳನ್ನು ಅಂಟಿಸುತ್ತಿದ್ದಾರೆಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಎಐಎಡಿಎಂಕೆ ತಳ್ಳಿಹಾಕಿದೆ.

Comments