ನವದೆಹಲಿ

ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಾಣಕ್ಕೆ ಬದ್ಧ: ಮೋದಿ

ಎಲ್ಲಾ ವರ್ಗದ ಜನರನ್ನು ಒಳಗೊಂಡ ರಾಷ್ಟ್ರ ನಿರ್ಮಾಣ ಮಾಡುವ  ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆ ಮತ್ತು ದೂರದೃಷ್ಟಿಯನ್ನು ಸಾಕಾರಗೊಳಿಸಲು ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ತಿಳಿಸಿದರು.

ನವದೆಹಲಿ (ಪಿಟಿಐ): ಎಲ್ಲಾ ವರ್ಗದ ಜನರನ್ನು ಒಳಗೊಂಡ ರಾಷ್ಟ್ರ ನಿರ್ಮಾಣ ಮಾಡುವ  ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆ ಮತ್ತು ದೂರದೃಷ್ಟಿಯನ್ನು ಸಾಕಾರಗೊಳಿಸಲು ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ತಿಳಿಸಿದರು.

ಭಾರತ ಪ್ರಸ್ತುತ ಎದುರಿಸುತ್ತಿರುವ  ಅಸಹಿಷ್ಣುತೆಯಂತಹ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್‌  ಚಿಂತನೆಗಳನ್ನು ಹೆಚ್ಚು ಹೆಚ್ಚು ಸ್ಮರಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಅಂಬೇಡ್ಕರ್‌ ಅವರ 125ನೇ ಜನ್ಮದಿನದ ಪ್ರಯುಕ್ತ ₹125 ಮತ್ತು ₹ 10ರ ನಾಣ್ಯಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಅಂಬೇಡ್ಕರ್‌ ಅವರು ಬಹುದೊಡ್ಡ  ಕನಸುಗಾರ ಹಾಗೂ ಚಿಂತಕರಾಗಿದ್ದರು’ ಎಂದರು.

ಆರ್ಥಿಕ ಚಿಂತನೆಗೆ ಸಿಗದ ಮನ್ನಣೆ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಾಮಾಜಿಕ ಚಿಂತನೆಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡಂತೆ ಅವರ ಕನಸು ಮತ್ತು ಆರ್ಥಿಕ ಚಿಂತನೆಗಳನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳಲಾಗಿಲ್ಲ ಎಂದು  ಮೋದಿ  ಇಲ್ಲಿ  ಹೇಳಿದರು.

ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಮರಣ ಹೊಂದಿದ 60 ವರ್ಷಗಳ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದ ಅವರು, ಅಂಬೇಡ್ಕರ್‌ ಅವರ ಆರ್ಥಿಕ ಚಿಂತೆನಗಳ ಬಗ್ಗೆಯೂ ಶ್ಲಾಘನೆ ವ್ಯಕ್ತವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್‌ ಅವರು ಸಾಕಷ್ಟು ಅವಮಾನ ಎದುರಿಸಿದರೂ ಅವರ ರಾಷ್ಟ್ರಪ್ರೇಮವನ್ನು ತಮ್ಮ ಕೆಲಸದ ಮೂಲಕ ವ್ಕಕ್ತಪಡಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.

Comments