ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ: ಅಲ್ಲಗೆಳೆದ ಎಐಎಡಿಎಂಕೆ

ಪರಿಹಾರ ಸಾಮಗ್ರಿ ಮೇಲೆ ‘ಅಮ್ಮಾ ಸ್ಟಿಕರ್‌’

ತಮಿಳುನಾಡಿನ ಸಂತ್ರಸ್ತರಿಗೆ ವಿವಿಧ ಭಾಗದ ಜನರು ನೀಡುತ್ತಿರುವ ಪರಿಹಾರ ಸಾಮಗ್ರಿಗಳ ಮೇಲೆ ಎಐಎಡಿಎಂಕೆ ಕಾರ್ಯಕರ್ತರು ಬಲವಂತವಾಗಿ ಮುಖ್ಯಮಂತ್ರಿ ಜಯ ಲಲಿತಾ ಅವರ ಸ್ಟಿಕರ್‌ಗಳನ್ನು ಅಂಟಿಸು ತ್ತಿದ್ದಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಚೆನ್ನೈ (ಪಿಟಿಐ): ತಮಿಳುನಾಡಿನ ಸಂತ್ರಸ್ತರಿಗೆ ವಿವಿಧ ಭಾಗದ ಜನರು ನೀಡುತ್ತಿರುವ ಪರಿಹಾರ ಸಾಮಗ್ರಿಗಳ ಮೇಲೆ ಎಐಎಡಿಎಂಕೆ ಕಾರ್ಯಕರ್ತರು ಬಲವಂತವಾಗಿ ಮುಖ್ಯಮಂತ್ರಿ ಜಯ ಲಲಿತಾ ಅವರ ಸ್ಟಿಕರ್‌ಗಳನ್ನು ಅಂಟಿಸು ತ್ತಿದ್ದಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಹಾರ ಸಾಮಗ್ರಿ  ಮೇಲೆ ಪಕ್ಷದ ಕಾರ್ಯಕರ್ತರು ಸ್ಟಿಕರ್ ಅಂಟಿಸುತ್ತಿಲ್ಲ ಎಂದು ಆಡಳಿತಾರೂಢ ಎಐಎಡಿಎಂಕೆ  ಭಾನುವಾರ ಹೇಳಿದೆ. ಸ್ಟಿಕರ್‌ ಅಂಟಿಸುವುದು ಕಂಡು ಬಂದರೆ ತಕ್ಷಣ ಪಕ್ಷದ ಕಚೇರಿಗೆ ಮಾಹಿತಿ ನೀಡಬಹುದು, ಇಲ್ಲವೇ ಪೊಲೀಸರಿಗೆ ದೂರು ನೀಡಬಹುದು ಎಂದು ತಿಳಿಸಿದೆ.

‘ಸ್ಟಿಕರ್ ಅಂಟಿಸುತ್ತಿರುವುದು ವದಂತಿ. ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ಕೆಲವು ದುಷ್ಟರು ಮಾಡು ತ್ತಿರುವ ಕೃತ್ಯ ಇರಬಹುದು’ ಎಂದು ಎಐಎಡಿಎಂಕೆ ಹಿರಿಯ ಮುಖಂಡ ರೊಬ್ಬರು ಹೇಳಿದ್ದಾರೆ.

ಪೆಟ್ರೋಲ್‌ ಬಂಕ್‌ ಕಾರ್ಯಾರಂಭ: ಮಳೆಯಿಂದ ನಲುಗಿದ್ದ ಚೆನ್ನೈ ಮಹಾನಗರದಲ್ಲಿ ಮುಚ್ಚಿದ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ 81 ರಷ್ಟು ಭಾನುವಾರ  ಕಾರ್ಯಾರಂಭ ಮಾಡಿವೆ.

ಚಿತ್ತೂರ್, ಬೆಂಗಳೂರು, ಸೇಲಂ ಮತ್ತು ತಿರುಚಿನಾಪಳ್ಳಿಗಳಿಂದ ಭಾರ ತೀಯ ತೈಲ ನಿಗಮ (ಐಎಸಿಎಲ್‌) ಇಂಧನವನ್ನು ಸರಬರಾಜು ಮಾಡಿಕೊಳ್ಳುತ್ತಿದೆ. ಅಡುಗೆ ಅನಿಲ ತುಂಬುವ ಚೆಂಗಲ್‌ ಪೇಟೆ ಮತ್ತು ಎನ್ನೋರ್‌ ಘಟಕಗಳಲ್ಲಿ ಹೆಚ್ಚುವರಿ ಪಾಳಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ರೈಲು ಸಂಚಾರ ಆರಂಭ: ವಿಜಯವಾಡ ಮತ್ತು ಚೆನ್ನೈ ನಡುವಣ ಕೆಲ ರೈಲುಗಳು ಭಾನುವಾರ ಸಂಚಾರ  ನಡೆಸಿದವು.
ತಮಿಳುನಾಡಿನಲ್ಲಿ ಮಳೆಯಿಂದ ₹15 ಸಾವಿರ ಕೋಟಿ ಮೊತ್ತದಷ್ಟು ಹಾನಿ ಉಂಟಾಗಿದೆ ಎಂದು ಅಸೋಚಾಂ ಅಂದಾಜಿಸಿದೆ.

ಕಡಲೂರು ಜಿಲ್ಲೆಯಲ್ಲಿ 2 ಲಕ್ಷ ಎಕರೆಯಲ್ಲಿ ಬೆಳೆದಿದ್ದ ಭತ್ತಕ್ಕೆ ಹಾನಿಯಾಗಿದೆ. ಇದಲ್ಲದೆ ಕಬ್ಬು ಮತ್ತು ಮತ್ತಿತರ ಬೆಳೆಗಳು ಪ್ರಮಾಣದಲ್ಲಿ  ಹಾನಿಗೊಳಗಾಗಿವೆ.

ನೆರವಿಗೆ ಮುಂದಾದ ಲೇಖಕರು, ಪ್ರಕಾಶಕರು: ಇಲ್ಲಿನ ಪ್ರಕಾಶನ ಸಂಸ್ಥೆಯೊಂದು ತನ್ನ ಇತ್ತೀಚಿನ  ಪ್ರಕಟಣೆಗಳ ಮಾರಾಟದಿಂದ ಬರುವ ಹಣದಲ್ಲಿ ಒಂದಷ್ಟು ಭಾಗವನ್ನು ಚೆನ್ನೈ ಸಂತ್ರಸ್ತರಿಗೆ ನೀಡಲಿದೆ.

ಅಂಕಿಅಂಶ
24 ಸಾವಿರ ಕಸ ವಿಲೇವಾರಿಗೆ ಪೌರ ಕಾರ್ಮಿಕರ  ನಿಯೋಜನೆ
453 ಟನ್‌ ಹಾಲಿನ ಪುಡಿಯನ್ನು ಚೆನ್ನೈ ಸೇರಿ ನಾಲ್ಕು ಜಿಲ್ಲೆಗಳಿಗೆ  ವಿತರಣೆ
140 ಗ್ರಾಮ ಕಡಲೂರುನಲ್ಲಿ ಜಲಾವೃತ

Comments