ನವದೆಹಲಿ

ಜಗದೀಶ್ ಟೈಟ್ಲರ್‌ ಮೇಲೆ ಹಲ್ಲೆಗೆ ಯತ್ನ: ಬಂಧನ

ಮದುವೆ ಆರತಕ್ಷತೆಯಲ್ಲಿ ಭಾಗಹಿಸಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ, 1984ರ ಸಿಖ್‌ ಹತ್ಯಾಕಾಂಡ ಆರೋಪಿ ಜಗದೀಶ್‌ ಟೈಟ್ಲರ್‌ ಅವರನ್ನು ಸಿಖ್‌ ಯುವಕನೊಬ್ಬ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ನವದೆಹಲಿ (ಪಿಟಿಐ): ಮದುವೆ ಆರತಕ್ಷತೆಯಲ್ಲಿ ಭಾಗಹಿಸಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ, 1984ರ ಸಿಖ್‌ ಹತ್ಯಾಕಾಂಡ ಆರೋಪಿ ಜಗದೀಶ್‌ ಟೈಟ್ಲರ್‌ ಅವರನ್ನು ಸಿಖ್‌ ಯುವಕನೊಬ್ಬ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ದಕ್ಷಿಣ ದೆಹಲಿಯ ಛಾತ್ರಾಪುರದ ಫಾರ್ಮ್‌ ಹೌಸ್‌ನಲ್ಲಿ ನಡೆದ ಆರತಕ್ಷತೆ ವೇಳೆ 23ರ ಯುವಕ ಶೆಹಜಾ ಉಮಾಂಗ್‌ ಭಾಟಿಯಾ ಎಂಬಾತ ಟೈಟ್ಲರ್‌ ಮೇಲೆ ಗಾಜಿನ ತುಣುಕುಗಳನ್ನು ಎಸೆದು ಹಲ್ಲೆಗೆ ಯತ್ನಿಸಿದ್ದು, ಆತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ, ಗಾಜಿನ ತುಣುಕುಗಳು ಜಗದೀಶ್ ಟೈಟ್ಲರ್‌ಗೆ ತಾಕಿಲ್ಲ ಎಂದು  ಪೊಲೀಸರು ತಿಳಿಸಿದರು. ವಿಚಾರಣೆ ನಡೆಸಿದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Comments