ಬಿಹಾರ: ಮಹಾವೀರ ವಿಗ್ರಹ ಪತ್ತೆ

ಇಲ್ಲಿನ ಜೈನ ದೇವಾಲಯದಿಂದ ಒಂಬತ್ತು ದಿನಗಳ ಹಿಂದೆ ಕಳುವಾಗಿದ್ದ ಸುಮಾರು 2600 ವರ್ಷಗಳಷ್ಟು ಹಳೆಯ ಭಗವಾನ್‌ ಮಹಾವೀರರ  ಅಮೂಲ್ಯ ವಿಗ್ರಹವನ್ನು ಪತ್ತೆ ಹಚ್ಚುವಲ್ಲಿ ಜಮುಯಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಮುಯಿ, ಪಟ್ನಾ (ಪಿಟಿಐ): ಇಲ್ಲಿನ ಜೈನ ದೇವಾಲಯದಿಂದ ಒಂಬತ್ತು ದಿನಗಳ ಹಿಂದೆ ಕಳುವಾಗಿದ್ದ ಸುಮಾರು 2600 ವರ್ಷಗಳಷ್ಟು ಹಳೆಯ ಭಗವಾನ್‌ ಮಹಾವೀರರ  ಅಮೂಲ್ಯ ವಿಗ್ರಹವನ್ನು ಪತ್ತೆ ಹಚ್ಚುವಲ್ಲಿ ಜಮುಯಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಸುಮಾರು 250 ಕೆ.ಜಿ ತೂಕದ ಭಗವಾನ್‌ ಮಹಾವೀರರ ವಿಗ್ರಹವನ್ನು ಜಮುಯಿ ಜಿಲ್ಲೆಯ ಬಿಚ್ವೆ ಎಂಬ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಭಾಗಲ್ಪುರ ವಲಯ ಐಜಿಪಿ ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

ಅಮೂಲ್ಯವಾದ ಈ ವಿಗ್ರಹ ಕಳುವಾದಾಗಿನಿಂದಲೂ ಜಮುಯಿ ಜಿಲ್ಲೆಯಲ್ಲಿ ಅವರು ಮೊಕ್ಕಾಂ ಹೂಡಿದ್ದರು.ವಿಗ್ರಹ ಕಳವು ಮಾಡಿದ್ದ ತಂಡದ ಒಬ್ಬ ಸದಸ್ಯನೇ ಪೊಲೀಸರಿಗೆ ಕರೆ ಮಾಡಿ, ಮಹಾವೀರರ ವಿಗ್ರಹವೊಂದು ಬಿಚ್ವೆ ಗ್ರಾಮದ ಮೈದಾನವೊಂದರಲ್ಲಿ ಬಿದ್ದಿರುವುದಾಗಿ ಮಾಹಿತಿ ನೀಡಿದ್ದ. 

  ವಿಗ್ರಹವನ್ನು ಮಾರುವ ಉದ್ದೇಶ ಕಳ್ಳರಿಗೆ ಇತ್ತಾದರೂ ತಮ್ಮ ತನಿಖಾ ತಂಡ ಆರೋಪಿಗಳ ಬೆನ್ನುಬಿದ್ದಿದ್ದರಿಂದ ಬೇರೆ ದಾರಿ ಕಾಣದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.

Comments