ನವದೆಹಲಿ

14 ಲಕ್ಷ ಇವಿಎಂ ಖರೀದಿಗೆ ಮುಂದಾದ ಕೇಂದ್ರ ಚುನಾವಣಾ ಆಯೋಗ

ಚುನಾವಣಾ ಆಯೋಗವು ₹5511 ಕೋಟಿ ಮೊತ್ತದಲ್ಲಿ 14 ಲಕ್ಷ ವಿದ್ಯುನ್ಮಾನ ಮತಯಂತ್ರ (ಇವಿಎಂ) ಖರೀದಿ ಮಾಡಲು ನಿರ್ಧರಿಸಿದೆ.

ನವದೆಹಲಿ: ಚುನಾವಣಾ ಆಯೋಗವು ₹5511 ಕೋಟಿ ಮೊತ್ತದಲ್ಲಿ 14 ಲಕ್ಷ ವಿದ್ಯುನ್ಮಾನ ಮತಯಂತ್ರ (ಇವಿಎಂ) ಖರೀದಿ ಮಾಡಲು ನಿರ್ಧರಿಸಿದೆ.

ಈಗಿರುವ ಸುಮಾರು 9 ಲಕ್ಷ ಇವಿಎಂಗಳನ್ನು 15 ವರ್ಷಗಳಿಂದ ಉಪಯೋಗಿಸಲಾಗುತ್ತಿದ್ದು,  ಅವುಗಳ ಬಳಕೆ ಅವಧಿ ಸದ್ಯದಲ್ಲೇ ಮುಗಿಯುತ್ತದೆ. ಹೀಗಾಗಿ ಹೊಸ ಯಂತ್ರಗಳ ಖರೀದಿಗೆ ಆಯೋಗವು ಮುಂದಾಗಿದೆ.

ಚುನಾವಣಾ ಆಯೋಗದ ಪ್ರಸ್ತಾವಕ್ಕೆ ಕಾನೂನು ಸಚಿವಾಲಯವು ತಾತ್ವಿಕ ಅನುಮೋದನೆ ನೀಡಿದೆ. ಹಣಕಾಸು ಸಚಿವಾಲಯದ ವೆಚ್ಚ ಸಮಿತಿಯು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ ಬಳಿಕ ಕಾನೂನು ಸಚಿವಾಲಯವು ಸಂಪುಟ ಸಭೆಯ ಅನುಮೋದನೆಗಾಗಿ ಇದನ್ನು ಕಳುಹಿಸಲಿದೆ.

ಕಾನೂನು ಸಚಿವಾಲಯದ ಶಾಸಕಾಂಗ ಘಟಕವು ಚುನಾವಣಾ ಆಯೋಗದ ನೋಡಲ್ ಘಟಕವಾಗಿರುತ್ತದೆ. ಸಮಿತಿಯ ಸಭೆಯು ಕಳೆದ ವಾರ ನಿಗದಿಯಾಗಿದ್ದರೂ ಕೊನೆ ಕ್ಷಣದಲ್ಲಿ ಮುಂದೂಡಿಕೆಯಾಗಿತ್ತು.

Comments