ಕೋಲ್ಕತ್ತ

ಗಂಗೋತ್ರಿ ನೀರ್ಗಲ್ಲು ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಳ!

ಗಂಗಾನದಿಯ ಜೀವನಾಡಿಯಾಗಿರುವ ಗಂಗೋತ್ರಿ ನೀರ್ಗಲ್ಲು ಪ್ರದೇಶದಲ್ಲಿ ಉಷ್ಣಾಂಶವು ಏರಿಕೆಯಾಗುತ್ತಿದೆ ಎಂದು ಸಂಶೋಧನೆಯೊಂದು ಹೇಳಿದೆ. ಈ ಭಾಗದಲ್ಲಿ ಉಷ್ಣತೆಯು 0.9 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. ಅಲ್ಲದೆ ಹಿಮಪಾತದ ಪ್ರಮಾಣವು ವಾರ್ಷಿಕವಾಗಿ 37 ಸೆಂ.ಮೀ.ನಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಕೋಲ್ಕತ್ತ(ಪಿಟಿಐ): ಗಂಗಾನದಿಯ ಜೀವನಾಡಿಯಾಗಿರುವ ಗಂಗೋತ್ರಿ ನೀರ್ಗಲ್ಲು ಪ್ರದೇಶದಲ್ಲಿ ಉಷ್ಣಾಂಶವು ಏರಿಕೆಯಾಗುತ್ತಿದೆ ಎಂದು ಸಂಶೋಧನೆಯೊಂದು ಹೇಳಿದೆ. ಈ ಭಾಗದಲ್ಲಿ ಉಷ್ಣತೆಯು 0.9 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. ಅಲ್ಲದೆ ಹಿಮಪಾತದ ಪ್ರಮಾಣವು ವಾರ್ಷಿಕವಾಗಿ 37 ಸೆಂ.ಮೀ.ನಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಹವಾಮಾನ ವಿಜ್ಞಾನಿಗಳ ತಂಡ 2000ನೇ ಇಸ್ವಿಯಿಂದ 13 ವರ್ಷಗಳ ಕಾಲ ಅಧ್ಯಯನ ನಡೆಸಿದೆ.  ಉಷ್ಣಾಂಶ ಏರಿಕೆಯಾಗುತ್ತಿರುವುದು ಆತಂಕಕಾರಿ ವಿಚಾರ ಎಂದು ವಿಜ್ಞಾನಿಗಳ ತಂಡವು ವಿಶ್ಲೇಷಿಸಿದೆ. 

ಅಧ್ಯಯನ ನಡೆದ ದಶಕದಲ್ಲಿ ಗರಿಷ್ಠ ಉಷ್ಣಾಂಶವು 0.9 ಡಿಗ್ರಿ ಹಾಗೂ ಕನಿಷ್ಠ ಉಷ್ಣತೆಯು 0.05 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಹಾಗೆಯೇ ಹಿಮಪಾತದಲ್ಲಿ ವಾರ್ಷಿಕವಾಗಿ 37 ಸೆಂ.ಮೀ.ನಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ಸೈನ್ಸ್ ಜರ್ನಲ್ ಪತ್ರಿಕೆಯಲ್ಲಿ ಸದ್ಯದಲ್ಲೇ ಈ ವರದಿಯು ಪ್ರಕಟಗೊಳ್ಳಲಿದೆ.

ಡಿಆರ್‌ಡಿಒ ಅಡಿ ಬರುವ ಸಂಸ್ಥೆಯೊಂದರ ವಿಜ್ಞಾನಿಗಳ ತಂಡವು  ಗಂಗೋತ್ರಿ ನೀರ್ಗಲ್ಲು ಪ್ರದೇಶದಿಂದ ಕೇವಲ 5 ಕಿ.ಮೀ. ದೂರದಲ್ಲಿ ‘ಭೋಜಬಸಾ ಪರಿವೀಕ್ಷಣಾ ಕೇಂದ್ರ’ದಲ್ಲಿ ಅಧ್ಯಯನ ನಡೆಸಿದೆ. ಕೆಲವು ವರ್ಷಗಳಿಂದ ಗಂಗೋತ್ರಿ ಸೇರಿ ಇತರ ನೀರ್ಗಲ್ಲುಗಳು ವಿಸ್ತೀರ್ಣದಲ್ಲಿ ಕುಗ್ಗುತ್ತಿವೆ. ಇದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ಐವರು ವಿಜ್ಞಾನಿಗಳ ತಂಡದ ಮುಖ್ಯಸ್ಥ ಎಚ್.ಎಸ್. ಗುಸೇನ್ ಹೇಳಿದ್ದಾರೆ.  ಉತ್ತರಾಖಂಡ ಜಿಲ್ಲೆಯಿಂದ 30 ಕಿ.ಮೀ. ದೂರದಲ್ಲಿ ಈ ಅಧ್ಯಯನ ನಡೆದಿದೆ.

Comments