ಇಸ್ಲಾಮಾಬಾದ್‌ನಲ್ಲಿ ಸಮಾವೇಶ: ಅಜೀಜ್‌ ಜತೆ ಮಾತುಕತೆ

ಬಹುಪಕ್ಷೀಯ ಸಭೆ: ಡಿ.8ಕ್ಕೆ ಪಾಕ್‌ಗೆ ಸುಷ್ಮಾ ಭೇಟಿ

ಪಾಕಿಸ್ತಾನದಲ್ಲಿ ಡಿ.9ರಂದು ನಡೆಯಲಿರುವ ಆಫ್ಘಾನಿಸ್ತಾನದ ಬಗೆಗಿನ ಬಹುಪಕ್ಷೀಯ ಸಮಾವೇಶದಲ್ಲಿ ಭಾಗವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಂಗಳವಾರ ಇಸ್ಲಾಮಾಬಾದ್‌ಗೆ ಪ್ರಯಾಣಿಸಲಿದ್ದಾರೆ.

ನವದೆಹಲಿ (ಪಿಟಿಐ): ಪಾಕಿಸ್ತಾನದಲ್ಲಿ ಡಿ.9ರಂದು ನಡೆಯಲಿರುವ ಆಫ್ಘಾನಿಸ್ತಾನದ ಬಗೆಗಿನ ಬಹುಪಕ್ಷೀಯ ಸಮಾವೇಶದಲ್ಲಿ ಭಾಗವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಂಗಳವಾರ ಇಸ್ಲಾಮಾಬಾದ್‌ಗೆ ಪ್ರಯಾಣಿಸಲಿದ್ದಾರೆ.

ಎರಡು ದಿನ ಈ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರ ಜತೆ ಸುಷ್ಮಾ ಮಾತುಕತೆ ನಡೆಸಲಿದ್ದಾರೆ.

ಸುಷ್ಮಾ ಸ್ವರಾಜ್‌ ನೇತೃತ್ವದ ಭಾರತದ ನಿಯೋಗವು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಆಫ್ಘಾನಿಸ್ತಾನ ಬಗೆಗಿನ ಬಹುಪಕ್ಷೀಯ ಸಭೆ ‘ ಹಾರ್ಟ್‌ ಆಫ್‌ ಏಷ್ಯಾ 5ನೇ ಸಚಿವರ  ಸಭೆ’ಯಲ್ಲಿ ಭಾಗವಹಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್‌ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್‌ಎಸ್‌ಎ) ಅಜಿತ್‌ ಧೋಬಾಲ್‌ ಮತ್ತು ನಾಸಿರ್‌ ಜಂಜುವಾ ಅವರು ಎರಡು ದಿನಗಳ ಹಿಂದಷ್ಟೇ ಬ್ಯಾಂಕಾಕ್‌ನಲ್ಲಿ ಭೇಟಿಯಾಗಿ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರ ವಿಚಾರ ಮತ್ತು ಇತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಮಾತುಕತೆಯು ಸುಷ್ಮಾ ಸ್ವರಾಜ್‌ ಅವರ ಪಾಕ್‌ ಭೇಟಿಯ ಹಾದಿಯನ್ನು ಸುಗಮಗೊಳಿಸಿತ್ತು.

Comments