ನವದೆಹಲಿ

ಸಿಪಿಐ ಹಿರಿಯ ನಾಯಕ ಎ.ಬಿ.ಬರ್ದನ್‌ ಅಸ್ವಸ್ಥ

ಸಿಪಿಐ ಪಕ್ಷದ ಹಿರಿಯ ನಾಯಕ ಎ.ಬಿ.ಬರ್ದನ್‌ ಅವರು ಪಾರ್ಶ್ವವಾಯುಗೆ ತುತ್ತಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನವದೆಹಲಿ (ಪಿಟಿಐ): ಸಿಪಿಐ ಪಕ್ಷದ ಹಿರಿಯ ನಾಯಕ ಎ.ಬಿ.ಬರ್ದನ್‌ ಅವರು ಪಾರ್ಶ್ವವಾಯುಗೆ ತುತ್ತಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬರ್ದನ್‌ ಅವರು ಸಿಪಿಐ ಪಕ್ಷದ ಕಾರ್ಯಾಲಯದಲ್ಲಿ ವಾಸವಿದ್ದರು. ಇಂದು ಮುಂಜಾನೆ ಪಾರ್ಶ್ವವಾಯುಗೆ ತುತ್ತಾದ ಅವರನ್ನು ಇಲ್ಲಿನ ಜಿ.ಬಿ ಪಂತ್‌ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪಕ್ಷದ ಪ್ರಧಾನಕಾರ್ಯದರ್ಶಿ ಅತುಲ್‌ ಕುಮಾರ್‌ ಅಂಜಾನ್‌ ತಿಳಿಸಿದ್ದಾರೆ.

92 ವರ್ಷದ ಬರ್ದನ್‌ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

1986ರಲ್ಲಿ ಬರ್ದನ್‌ ಅವರ ಪತ್ನಿ ತೀರಿಕೊಂಡಿದ್ದರು. ಬರ್ದನ್‌ ಅವರಿಗೆ ಮಗ ಮತ್ತು ಪುತ್ರಿ ಇದ್ದಾರೆ.

Comments