ಸುದರ್ಶನ ನಾಚಿಯಪ್ಪನ್‌ ನೇತೃತ್ವದ ಸಮಿತಿ

ಲೋಕಪಾಲ ವ್ಯಾಪ್ತಿಗೆ ಸಿವಿಸಿ, ಸಿಬಿಐ: ಸ್ಥಾಯಿ ಸಮಿತಿ ಶಿಫಾರಸು

ಭ್ರಷ್ಟಾಚಾರ ನಿಗ್ರಹಕ್ಕಾಗಿ ರೂಪಿಸಲಾಗಿರುವ ಲೋಕಪಾಲ ವ್ಯಾಪ್ತಿಗೆ ಕೇಂದ್ರ ಗುಪ್ತಚರ ಆಯೋಗ (ಸಿವಿಸಿ) ಮತ್ತು ಸಿಬಿಐನ ಭಯೋತ್ಪಾದನೆ ತಡೆ ಘಟಕವನ್ನು  ತರಬೇಕು. ಈ ಸಂಸ್ಥೆಗಳು ನೇರವಾಗಿ ಲೋಕ್‌ಪಾಲ್‌ ಅಧೀನದಲ್ಲಿ ಮತ್ತು ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಗ್ರಹಕ್ಕಾಗಿ ರೂಪಿಸಲಾಗಿರುವ ಲೋಕಪಾಲ ವ್ಯಾಪ್ತಿಗೆ ಕೇಂದ್ರ ಗುಪ್ತಚರ ಆಯೋಗ (ಸಿವಿಸಿ) ಮತ್ತು ಸಿಬಿಐನ ಭಯೋತ್ಪಾದನೆ ತಡೆ ಘಟಕವನ್ನು  ತರಬೇಕು. ಈ ಸಂಸ್ಥೆಗಳು ನೇರವಾಗಿ ಲೋಕ್‌ಪಾಲ್‌ ಅಧೀನದಲ್ಲಿ ಮತ್ತು ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ಲೋಕಪಾಲ ಅಧ್ಯಕ್ಷ ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಸ್ಥಾನ ನೀಡಬೇಕು.  ಒಂದು ವೇಳೆ ವಿರೋಧ ಪಕ್ಷದ ನಾಯಕ ಇಲ್ಲದಿದ್ದರೆ, ಆ ಸ್ಥಾನವನ್ನು ಲೋಕಸಭೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದಿರುವ ವಿರೋಧ ಪಕ್ಷವೊಂದರ ನಾಯಕನಿಗೆ ನೀಡಬೇಕು ಎಂದೂ ಕಾಂಗ್ರೆಸ್‌ ಸಂಸದ ಸುದರ್ಶನ ನಾಚಿಯಪ್ಪನ್ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ. 

ಸ್ಥಾಯಿ ಸಮಿತಿ ನೀಡಿರುವ ಈ ಶಿಫಾರಸ್ಸನ್ನು ಸಂಸತ್ತು ಒಪ್ಪಿದರೆ, ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪ್ರಧಾನಿ ಮೋದಿ ನೇತೃತ್ವದ ಲೋಕ್‌ಪಾಲ್‌ ಆಯ್ಕೆ ಸಮಿತಿಯಲ್ಲಿ ಸ್ಥಾನ ಲಭಿಸಲಿದೆ.

ಲೋಕ್‌ಪಾಲ್‌ ಮತ್ತು ಸಿವಿಸಿ  ಹೊಂದಿರುವ ಅಧಿಕಾರ, ಹೊಣೆಗಾರಿಕೆ ಮತ್ತು ಕಾರ್ಯಗಳನ್ನು  ಸಮಿತಿ ಸ್ಪಷ್ಟವಾಗಿ ಹೇಳಿದೆ. ಸಿವಿಸಿ ಮತ್ತು ಸಿಬಿಐನ ಭಯೋತ್ಪಾದನೆ ನಿಗ್ರಹ ಘಟಕವನ್ನು ವಿಚಾರಣೆ, ತನಿಖೆ ಮತ್ತು ಕಾನೂನು ಕ್ರಮ ಜರುಗಿಸುವುದಕ್ಕೆ ಬಳಸಿಕೊಳ್ಳುವ ಅಧಿಕಾರವನ್ನು ಲೋಕ್‌ಪಾಲ್‌ ಹೊಂದಿದೆ ಎಂದೂ ಸಮಿತಿ ಶಿಫಾರಸಿನಲ್ಲಿ ಸ್ಪಷ್ಟಪಡಿಸಿದೆ.

Comments