ರೈಲು ಡಿಕ್ಕಿ : ಇಬ್ಬರು ಸಾವು

ಇಂದು ಮುಂಜಾನೆ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಮೃತಪಟ್ಟು ನೂರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಪಲ್ವಾಲ್‌ (ಹರಿಯಾಣ)(ಪಿಟಿಐ): ಇಂದು ಮುಂಜಾನೆ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಮೃತಪಟ್ಟು ನೂರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಪಲ್ವಾಲ್‌  ಜಿಲ್ಲೆಯ ಬಾಗೋಲ್‌  ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ಜರುಗಿದೆ. ವಿದ್ಯುತ್‌ ಚಾಲಿತ ರೈಲು, ಎಕ್ಸ್‌ಪ್ರೆಸ್‌ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ರೈಲು ಚಾಲಕ ಸೇರಿದಂತೆ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದಾನೆ.

ದಟ್ಟವಾದ ಮಂಜು ಕವಿದಿದ್ದರಿಂದ ಈ ಅಪಘಾತ ಜರುಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Comments