ಸನ್ನಡತೆ; 8 ತಿಂಗಳು ಮೊದಲೇ ಬಿಡುಗಡೆ

ಮಾರ್ಚ್‌ನಲ್ಲಿ ಸಂಜಯ್‌ ದತ್‌ ಬಿಡುಗಡೆ ?

ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್‌ ನಟ ಸಂಜಯ್‌ ದತ್‌ ಬರುವ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಪುಣೆ (ಐಎಎನ್‌ಎಸ್‌):  ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್‌ ನಟ ಸಂಜಯ್‌ ದತ್‌  ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸಂಜಯ್‌ ದತ್‌ ಜೈಲು ಸೇರಿದ್ದರು. ಅವರಿಗೆ ನ್ಯಾಯಾಲಯ 42 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. 2016 ನವೆಂಬರ್‌ ತಿಂಗಳಿಗೆ ಅವರ ಜೈಲು ಶಿಕ್ಷೆ ಅಂತ್ಯಗೊಳ್ಳಲಿದೆ.  ಸನ್ನಡತೆಯ ಆಧಾರದ ಮೇಲೆ ಮಾರ್ಚ್‌ ತಿಂಗಳಲ್ಲೇ ಸಂಜಯ್‌ ದತ್‌ ಬಿಡುಗಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜೈಲು ಅಧಿಕಾರಿಗಳು ಕಡತಗಳನ್ನು ಪರಿಶೀಲಿಸುತ್ತಿದ್ದು, ಮಾರ್ಚ್‌ನಲ್ಲಿ ಸಂಜಯ್‌ ಬಿಡುಗಡೆಯಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

ಸಂಜಯ್‌ ದತ್‌ಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.  ವಿಚಾರಣಾಧೀನ ಕೈದಿಯಾಗಿ ಅವರು 18 ತಿಂಗಳು ಜೈಲುವಾಸ ಅನುಭವಿಸಿದ್ದರು.

Comments