ಖಾನ್‌ ತ್ರಯರಿಂದ ದೇಶಕ್ಕೆ ಕಳಂಕ: ಸಾಧ್ವಿ ಪ್ರಾಚಿ

ಅಸಹಿಷ್ಣುತೆ ವಿರುದ್ಧ ಹೇಳಿಕೆ ನೀಡುವ ಮೂಲಕ ಬಾಲಿವುಡ್‌ ನಟರಾದ ಶಾರೂಕ್‌ ಖಾನ್‌, ಅಮೀರ್‌ ಖಾನ್‌ ಮತ್ತು ಉತ್ತರ ಪ್ರದೇಶ ಸಚಿವ ಅಜಂ ಖಾನ್‌ ಅವರು ದೇಶದ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ ನಾಯಕಿ ಸಾಧ್ವಿ ಪ್ರಾಚಿ  ಹೇಳಿದ್ದಾರೆ.

ಜೆಮ್‌ಶೆಡ್‌ಪುರ (ಪಿಟಿಐ):  ಅಸಹಿಷ್ಣುತೆ ವಿರುದ್ಧ ಹೇಳಿಕೆ ನೀಡುವ ಮೂಲಕ ಬಾಲಿವುಡ್‌ ನಟರಾದ ಶಾರೂಕ್‌ ಖಾನ್‌, ಅಮೀರ್‌ ಖಾನ್‌ ಮತ್ತು ಉತ್ತರ ಪ್ರದೇಶ ಸಚಿವ ಅಜಂ ಖಾನ್‌ ಅವರು ದೇಶದ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ ನಾಯಕಿ ಸಾಧ್ವಿ ಪ್ರಾಚಿ  ಹೇಳಿದ್ದಾರೆ.

ಸಾಧ್ವಿ ಪ್ರಾಚಿ ಅವರ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

ದೇಶದಲ್ಲಿ ಸಹಿಷ್ಣುತೆ ಇದೆ. ಅಸಹಿಷ್ಣುತೆ ಹಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ದೇಶದ ವರ್ಚಸ್ಸಿಗೆ ಕೆಟ್ಟ ಹೆಸರು ತರುವ ಪ್ರಯತ್ನ. ಪ್ರಶಸ್ತಿ ಹಿಂತಿರುಗಿಸುತ್ತಿರುವವರು ದೇಶದ್ರೋಹಿಗಳು ಎಂದು ಅವರು  ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Comments